Fri. Jan 10th, 2025

Belthangady: ಪಟ್ರಮೆಯ ಹಿಂದು ಯುವಕನೊಂದಿಗೆ ಮದುವೆಯಾದ ಮೂಡಬಿದ್ರೆಯ ಮುಸ್ಲಿಂ ಯುವತಿ!!

ಬೆಳ್ತಂಗಡಿ:(ಜ.10) ಪ್ರೀತಿ ಮಾಡಿ ಬೇರೆಯಾಗೋ ಈ ಕಾಲದಲ್ಲಿ , ಬೇರೆ ಧರ್ಮದವರಾದರೂ ಪರವಾಗಿಲ್ಲ, ಮದುವೆಯಾಗಿ ಪ್ರೀತಿಯನ್ನು ಉಳಿಸೋಣ ಅನ್ನೋ ನಿಲುವು ಇಟ್ಟುಕೊಂಡು , ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ಹಿಂದು ಸಂಪ್ರದಾಯದಂತೆ ಮದುವೆಯಾದ ವಿಶೇಷವಾದ ಘಟನೆ ನಡೆದಿದೆ.

ಮೂಡಬಿದ್ರೆಯ ಕಂಪ್ಯೂಟರ್ ಕ್ಲಾಸ್‌ಗೆಂದು ಹೋಗಿದ್ದ ನೆಲ್ಲಿಕಾರಿನ ಮುಸ್ಲಿಂ ಯುವತಿಯೊಬ್ಬಳು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ತಾನು ಪ್ರೀತಿಸುತ್ತಿದ್ದ ಹಿಂದು ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಉಜಿರೆ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಆಯ್ಕೆ

ನೆಲ್ಲಿಕಾರಿನ ಸುಹಾನ (19) ನಾಪತ್ತೆಯಾಗಿದ್ದ ಯುವತಿ. ಈ ಕುರಿತು ಮೂಡಬಿದ್ರೆಯ ಪೊಲೀಸ್ ಠಾಣೆಗೆ ಯುವತಿಯ ಮನೆ ಮಂದಿ ದೂರು ನೀಡಿದ್ದರು.


ನಾಪತ್ತೆಯಾಗಿದ್ದ ಸುಹಾನ ಹಾಗೂ ಧರ್ಮಸ್ಥಳ ಸಮೀಪದ ಪಟ್ರಮೆಯ ಹರೀಶ್ ಗೌಡ (24) ನಡುವೆ ಕಳೆದ ಒಂದು ವರ್ಷದಿಂದ
ಫೇಸ್‌ಬುಕ್ ಮೂಲಕ ಪರಿಚಯವಾಗಿ ಮುಂದೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿತ್ತು. ಇಬ್ಬರು ವಿವಾಹವಾಗಲು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ಸುಹಾನ ಮನೆಮಂದಿಗೂ ತಿಳಿಸದೇ ಯುವಕನ ಸೂಚನೆಯಂತೆ ನೇರವಾಗಿ ಬೆಳ್ತಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಳು.

ದೇವಸ್ಥಾನದಲ್ಲಿ ಸುಹಾನ ಹಾಗೂ ಹರೀಶ್ ಗೌಡ ಹಾರ ಬದಲಾಯಿಸಿಕೊಂಡಿದ್ದಾರೆ. ಆ ಕ್ಷಣದಲ್ಲಿ ಸುಹಾನಳಿಗೆ ಹರೀಶ್ ಗೌಡ ಮಾಂಗಲ್ಯಧಾರಣೆ ಮಾಡಿದ್ದಾನೆ.

ಮುಸ್ಲಿಂ ಯುವತಿ ಸುಹಾನ ತನ್ನ ಇಚ್ಚೆಯಂತೆ ಹಿಂದು ಸಂಪ್ರದಾಯ ಪ್ರಕಾರ ಹಿಂದು ಯುವಕನೊಂದಿಗೆ ವಿವಾಹವಾಗಿದ್ದಳು.
ನವದಂಪತಿ ನೇರವಾಗಿ ಬೆಳ್ತಂಗಡಿ ವಿವಾಹ ನೊಂದಾವಣಾ ಕಚೇರಿಗೆ ತೆರೆಳಿ, ಹಿಂದು ವಿವಾಹ ಕಾಯಿದೆಯ ಪ್ರಕಾರ ವಿವಾಹ ನೊಂದಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.


ಸುಹಾನ ನಾಪತ್ತೆ ಪ್ರಕರಣ ಕುರಿತು ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಸುಹಾನ ಹಾಗೂ ಹರೀಶ್ ಗೌಡ ವಿವಾಹವಾಗಿ ಧರ್ಮಸ್ಥಳ ಠಾಣೆಗೆ ಹಾಜರಾಗಿದ್ದರು. ಈ ವಿಚಾರವು ಮೂಡಬಿದ್ರೆಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸುಹಾನಳ ಮನೆಮಂದಿಯನ್ನು ಠಾಣೆಗೆ ಕರೆಯಿಸಿ ನಡೆದಿರುವ ಬೆಳವಣಿಗೆ ಹಾಗೂ ವಿವಾಹವಾದ ಫೋಟೋಗಳನ್ನು ತೋರ್ಪಡಿಸಿದ್ದಾರೆ.

Leave a Reply

Your email address will not be published. Required fields are marked *