Fri. Jan 10th, 2025

Mangaluru: ಕ್ಯುಆರ್‌ ಕೋಡ್‌ ಬದಲಿಸಿ ಪೆಟ್ರೋಲ್ ಬಂಕ್‌ಗೆ ಲಕ್ಷಾಂತರ ರೂ. ವಂಚನೆ ಮಾಡಿದ ಸುಪರ್‌ವೈಸರ್‌ !

ಮಂಗಳೂರು:(ಜ.10)ಪೆಟ್ರೋಲ್‌ ಬಂಕ್‌ನ ಸುಪರ್‌ವೈಸರ್‌ ತನ್ನ ವೈಯಕ್ತಿಕ ಖಾತೆಯ ಕ್ಯು ಆರ್‌ ಕೋಡ್‌ ಅನ್ನು ಹಾಕಿ ಬಂಕ್‌ಗೆ 58.85 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಪಟ್ರಮೆಯ ಹಿಂದು ಯುವಕನೊಂದಿಗೆ ಮದುವೆಯಾದ ಮೂಡಬಿದ್ರೆಯ ಮುಸ್ಲಿಂ ಯುವತಿ!!

ಕೂಳೂರಿನ ರಿಲಯನ್ಸ್‌ ಔಟ್‌ಲೆಟ್‌ ಫ್ಯುಯೆಲ್ ಬಂಕ್‌ನಲ್ಲಿ ಸೂಪರ್‌ವೈಸರ್‌ ಆಗಿದ್ದ ಆರೋಪಿ ಮೋಹನದಾಸ್‌, ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆಯನ್ನು ನಡೆಸಿಕೊಂಡು ಸಂಪೂರ್ಣ ಜವಾಬ್ದಾರಿ ನೋಡಿಕೊಂಡು ಮಾಲೀಕನ ನಂಬಿಕೆ ಗಳಿಸಿದ್ದ.

ಆದರೆ ಹಣದ ಆಸೆಗೆ ಆರೋಪಿ ಮೋಹನದಾಸ್‌ 2023ರ ಮಾ. 1ರಿಂದ ಜು. 31ರ ವರೆಗೆ ಪೆಟ್ರೋಲ್‌ ಬಂಕ್‌ನಲ್ಲಿ ಬಂಕ್‌ನ ಕ್ಯುಆರ್‌ ಕೋಡ್‌ ತೆಗೆದು ತನ್ನ ವೈಯಕ್ತಿಯ ಖಾತೆಯ ಕ್ಯುಆರ್‌ ಕೋಡ್‌ನ್ನು ಅಳವಡಿಸಿ ಗ್ರಾಹಕರಿಗೆ ಬಂಕ್‌ನದ್ದೇ ಕ್ಯುಆರ್‌ ಕೋಡ್‌ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್‌ ಔಟ್‌ಲೆಟ್‌ ಫ್ಯುಯೆಲ್ ಬಂಕ್‌ನ ಮ್ಯಾನೇಜರ್‌ ನಗರದ ಸೆನ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *