ಬೆಳ್ತಂಗಡಿ( ಯು ಪ್ಲಸ್ ಟಿವಿ):(ಜ.11) ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸರಿಗಮಪ ಖ್ಯಾತಿಯ ಜ್ಞಾನ ಗುರುರಾಜ್ ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಿ ತಾಯಿ ಚಾಮುಂಡಿಯನ್ನು ವಿಶೇಷವಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ: ಉಡುಪಿ: ಬೈಕ್ ಗೆ ಟ್ರಕ್ ಢಿಕ್ಕಿ
ಈ ವೇಳೆ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ಜ್ಞಾನ ಗುರುರಾಜ್ ನನ್ನು ಆಶೀರ್ವದಿಸಿದರು. ಬಳಿಕ ಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜ್ಞಾನ ಗುರುರಾಜ್ ತಾಯಿ ರೇಖಾ ಗುರುರಾಜ್, ಆಡಳಿತ ಮೊಕ್ತೇಸರರು ಡೊಂಬಯ್ಯ ಗೌಡ, ಅಧ್ಯಕ್ಷರು ವಸಂತ ಗೌಡ ಆರಿಕೋಡಿ, ಸಿದ್ದಿಶ್ರೀ ಲೀಫ್ ಮಾಲೀಕರಾದ ಹರೀಶ್ ಕೋಡಿಮಜಲು, ಶ್ರೀಕೃಪಾ ಲೀಫ್ ಕಪ್ ಮಾಲೀಕರಾದ ಗಣೇಶ್ ಕೆ, ಪ್ರಜ್ವಲ್ ಕಾಂತಾಜೆ, ಶ್ರೀಮತಿ ಮತ್ತು ಕೇಶವ ಗೌಡ ಯಶ್ ವಾಟರ್ ನೆಟ್ ಬೆಂಗಳೂರು, ಸುನೀತಾ ಹೆಗ್ಗಡೆ, ಶ್ವೇತಾ ಸೇರಿದಂತೆ ಹಲವಾರು ಗಣ್ಯರು, ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.