Sat. Jan 11th, 2025

Belthangady: ಬಾರ್ಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಬೆಳ್ತಂಗಡಿ:(ಜ.11) ಬೆಳ್ತಂಗಡಿ ತಾಲೂಕು ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ಉತ್ಸವ ಮತ್ತು ಗ್ರಾಮದೈವದ ನೇಮೋತ್ಸವವು ಫೆಬ್ರವರಿ 7ರಂದು ನಡೆಯಲಿದ್ದು , ದೇವಳದ ಆವರಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ದೈವಗಳ ಗುರಿಕಾರ ಭಾಸ್ಕರ ಬಾರ್ಯ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ಬಂದಾರು : ಪೆರ್ಲ -ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶೋತ್ಸವ

ಫೆಬ್ರವರಿ 6ರಂದು ಹಸಿರು ಹೊರೆಕಾಣಿಕೆ, ಭಜನಾ ಸೇವೆ,ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳು ಸಹಕರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಳದ ಅರ್ಚಕ ಗುರುಪ್ರಸಾದ ನೂರಿತ್ತಾಯ, ಆಡಳಿತ ಸೇವಾ ಟ್ರಸ್ಟಿನ ಟ್ರಸ್ಟಿಗಳಾದ ಪ್ರಶಾಂತ ಪೈ ಬಾರ್ಯ, ಶೇಷಪ್ಪ ಸಾಲಿಯನ್, ನಾರಾಯಣ ಗೌಡ ಮನೋಹರ ಶೆಟ್ಟಿ, ವಿಶ್ವನಾಥ ಗೌಡ, ರಾಮಣ್ಣಗೌಡ, ಭಾಸ್ಕರ ಮಜಿಕುಡೆ, ವಿದ್ಯಾ ಪ್ರಭಾಕರ ನೂರಿತ್ತಾಯ, ವಿಜಯಲಕ್ಷ್ಮಿ, ನವೀನ, ವಾರಿಣಿ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *