ಬೆಳ್ತಂಗಡಿ:(ಜ.12) ಬೆಳ್ತಂಗಡಿ ತಾಲೂಕು ಯುವಜನ ಒಕ್ಕೂಟದ ಮಹಾಸಭೆಯು ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಒಕ್ಕೂಟದ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ಮುಂಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದನ್ನೂ ಓದಿ: ಉಡುಪಿ: ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ದೇಸಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಾಗಾರ
ಸಭೆಯಲ್ಲಿ 2025 -26 ನೇ ಸಾಲಿನ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯ, ಕೋಶಾಧಿಕಾರಿಯಾಗಿ ಪ್ರಶಾಂತ್ ಮಚ್ಚಿನ,
ಉಪಾಧ್ಯಕ್ಷರಾಗಿ ಸದಾಶಿವ ಹೆಗ್ಡೆ, ಸೌಮ್ಯ ಲಾಯಿಲ, ಜತೆ ಕಾರ್ಯದರ್ಶಿಯಾಗಿ ಸುಧಾಮಣಿ ಆರ್, ಕ್ರೀಡಾ ಸಂಚಾಲಕರಾಗಿ ಹರೀಶ್ ಶಿಶಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶೇಖರ್ ಲಾಯಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಮಹಮದ್ ಸಿದ್ದಿಕ್ ಮಲೆಬೆಟ್ಟು, ರಾಮಚಂದ್ರ ಶಿಶಿಲ, ಹರಿಣಾಕ್ಷಿ ಬದನಾಜೆ, ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಗೌರವ ಅಧ್ಯಕ್ಷರಾದ ರಾಜೀವ್ ಸಾಲಿಯಾನ್ ಮುಂಡೂರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷರಾದ ಲೋಕೇಶ್ ಶೆಟ್ಟಿ ಧರ್ಮಸ್ಥಳ, ವಿಠಲ್ ಸಿ ಪೂಜಾರಿ ಹೊಸಂಗಡಿ , ಸಿ ಕೆ ಚಂದ್ರಕಲಾ, ಹಾಗೂ ತಾಲೂಕಿನ ಯುವಕ ಮಂಡಲಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.