ಕೇರಳ:(ಜ.12) ಕೇರಳ ಪೊಲೀಸರು ಅಪ್ರಾಪ್ತ ಕ್ರೀಡಾಪಟುವಿನ ಮೇಲೆ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಹಪಾಠಿಗಳು ಮತ್ತು ಆಕೆಯ ತರಬೇತುದಾರರು ಸೇರಿದಂತೆ 64 ವ್ಯಕ್ತಿಗಳ ವಿರುದ್ಧ 4 ಎಫ್‌ಐಆರ್ ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದೆ 18 ವರ್ಷ ತುಂಬಿದ ಯುವತಿ ಪಥನಾಂತಿಟ್ಟದಲ್ಲಿ 2 ವರ್ಷಗಳ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎನ್ನಲಾಗಿದೆ. 5 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಕೋಚ್ಗಳಿಂದ ಹಾಗೂ ತನ್ನೊಂದಿಗೆ ಸ್ವಿಮ್ಮಿಂಗ್ ಕ್ಲಾಸ್ಗೆ ಬರುತ್ತಿದ್ದವರಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಪ್ರಾಪ್ತ ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದ ನೀಚರು!!
ಪೊಲೀಸರ ಪ್ರಕಾರ, ಅಪ್ರಾಪ್ತ ಯುವತಿ ಹೇಳಿದಂತೆ 60ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಸೂಚಿಸಲಾಗಿದೆ. ಈ ಪ್ರಕರಣದ ಐವರು ಆರೋಪಿಗಳು ಪಥನಾಂತಿಟ್ಟ ನಿವಾಸಿಗಳಾಗಿದ್ದಾರೆ. ಬಂಧಿತರ ಮೊಬೈಲ್ ಫೋನ್‌ಗಳಲ್ಲಿನ ಫೋಟೋಗಳಿಂದ ತನ್ನ ಮೇಲೆ ಅತ್ಯಾಚಾರವೆಸಗಿದ ಇತರ 40 ಜನರನ್ನು ಯುವತಿ ಗುರುತಿಸಿದ್ದಾಳೆ.
ಕ್ರೀಡಾಪಟುವಾಗಿರುವ ದಲಿತ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದಾಗ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 15 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 16ನೇ ವಯಸ್ಸಿನಿಂದ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿರುವ 18 ವರ್ಷದ ಯುವತಿಯ ಹೇಳಿಕೆಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಆಕೆಯ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳು ಸೇರಿದಂತೆ ಹಲವು ವ್ಯಕ್ತಿಗಳು ಆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದಕ್ಕೆ ಪುರಾವೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 60ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದು, ಪಥನಾಂತಿಟ್ಟದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಥನಾಂತಿಟ್ಟ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪಥನಾಂತಿಟ್ಟ ಜಿಲ್ಲೆಯ ಹೊರಗಿನ ವ್ಯಕ್ತಿಗಳು ಸಹ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಹೇಳಿದೆ.
ಸಿಡಬ್ಲ್ಯೂಸಿ ಅಧ್ಯಕ್ಷರ ಪ್ರಕಾರ, ಆ ಹುಡುಗಿಗೆ 13ನೇ ವಯಸ್ಸಾದಾಗಿನಿಂದಲೂ ಆಕೆ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾಳೆ. ಇದು ಅಸಾಮಾನ್ಯ ಪ್ರಕರಣವಾದ್ದರಿಂದ, ಹೆಚ್ಚಿನ ಸಮಾಲೋಚನೆಗಾಗಿ ಅವಳನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಲಾಯಿತು.