Sun. Jan 12th, 2025

ಮಂಗಳೂರು:(ಜ.12) ನಗರದ ಮರವೂರು ಬಳಿಯ ಸೇತುವೆಯಿಂದ ಕೆಳಗೆ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ರವಿವಾರ ಬೆಳಳಗ್ಗೆ ನಡೆದಿದೆ.

ಇದನ್ನೂ ಓದಿ: ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ(ರಿ.) ಉಜಿರೆ ಇವರ ನೇತೃತ್ವದಲ್ಲಿ


ಕುಂಜತ್ತಬೈಲು ನಿವಾಸಿ ರೇವತಿ (60) ಮೃತ ಮಹಿಳೆ ಎಂದು ತಿಳಿದು ಬಂದಿದೆ.

ರವಿವಾರ ಬೆಳಿಗ್ಗೆ 7.30 ರಿಂದ 8.30ರ ಸುಮಾರಿಗೆ ಅಂಗಡಿಗೆ ಹೋಗುತ್ತಿದ್ದ ರೇವತಿ ಅವರು ಮರವೂರು ಸೇತುವೆಯ ಬಳಿ ಏಕಾಏಕಿ ನದಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರು ಅವರ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಂಗಡಿಗೆ ಹೋಗಿದ್ದ ರೇವತಿಯನ್ನು ಕಾಣದಾದಾಗ ಮನೆಯವರು ಅವರನ್ನು ಹುಡುಕುತ್ತಾ ಬಂದಿದ್ದರು.ಬಳಿಕ ಮೃತರ ಮಗ ಮೃತದೇಹ ತಾಯಿ ರೇವತಿಯದ್ದು ಎಂದು ದೃಢ ಪಡಿಸಿದ್ದರು.

ಮೃತದೇಹವನ್ನು ಮಹಜರುಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ರೇವತಿಯವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಕಾವೂರು ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *