ಉಡುಪಿ:(ಜ.12) ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ದೇಸಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಾಗಾರ ವನ್ನು ಪರ್ಯಾಯ ಪೀಠಾಧಿಪತಿ ಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಶ್ರೀ ಪುತ್ತಿಗೆ ಮಠ, ಇವರ ದಿವ್ಯಾ ಆಶೀರ್ವಾದದೊಂದಿಗೆ ದೀಪಾ ಬೆಳಗಿಸಿ ಉದ್ಘಾಟಿಸಿ, ಭಗವಂತನು ಆಹಾರವನ್ನು ಆರೋಗ್ಯ ಮತ್ತು ಶಕ್ತಿಗಾಗಿ ನಿರ್ಮಾಣ ಮಾಡಿದ್ದರೆ, ಮನುಷ್ಯ ಮಾತ್ರ ತನ್ನ ಜಾಸ್ತಿ ಬುದ್ದಿ ವಂತಿಕೆ ಮತ್ತು ಆಧುನಿಕತೆಯ ನೆಪದಲ್ಲಿ ಆಹಾರ ದಿಂದಲೇ ಭಯಂಕರ ರೋಗಗಳನ್ನು ನಿರ್ಮಾಣ ಮಾಡಿಕೊಂಡು ಸಂಕಟ ಪಡುತ್ತಿದ್ದಾನೆ, ನಾಲಿಗೆಯ ರುಚಿ ಮತ್ತು ಭಯಂಕರ ಅಭ್ಯಾಸಗಳಿಂದ ಔಷಧಿಯೇ ಆಹಾರವಾಗಿದೆ.
ಇದನ್ನೂ ಓದಿ: Puttur: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ!!
ವಿಶ್ವ ಎದುರಿಸುತ್ತಿರುವ ಅನಾರೋಗ್ಯದ ಭಯಭೀತ ಸಮಸ್ಯೆಗೆ ಮನುಷ್ಯನಿಂದಲೇ ಪರಿಹಾರ ಉತ್ತಮ ಆಹಾರ ಪದ್ಧತಿ ಜಾಗೃತಿ ಮತ್ತು ಉತ್ತಮ ಆಹಾರದ ಸಂರಕ್ಷಣಾ ಕಾರ್ಯಕ್ರಮ ಜಗತ್ತಿಗೆ, ದೇಶಕ್ಕೆ ಮತ್ತು ರಾಜ್ಯ ಜಿಲ್ಲೆಗೆ ಮಾದರಿಜಿಲ್ಲಾಡಳಿತದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರ ಮಾರ್ಗದರ್ಶನದಲ್ಲಿ ರಾಜಗಣದಲ್ಲಿ ಚಾಲನೆ ಪಡೆದಿರುವುದು, ಶ್ರೀ ಕೃಷ್ಣ ಮುಖ್ಯ ಪ್ರಾಣ ನ ಕೃಪೆಗೆ ಪಾತ್ರವಾಗಿದೆ. ಅನೇಕ ಉತ್ತಮ ಕಾರ್ಯಕ್ರಮ ಗಳಿಗೆ ಕಾಳಜಿಯಿಂದ ಸೇವೆ ಮಾಡುತ್ತಿರುವ ಮಾನ್ಯ ಜಿಲ್ಲಾಧಿಕಾರಿಯವರಿಗೆ ಇನ್ನಷ್ಟು ಶಕ್ತಿ ದೊರೆಯಲಿ, ನಾವೆಲ್ಲರೂ ಜೊತೆಯಾಗಿ ಒಳ್ಳೆಯ ಸೇವೆ ಮಾಡೋಣ ಎಂದರು. ಸಿರಿ ಧಾನ್ಯ ಗಳ ಮಹತ್ವ ಮತ್ತು ಸಂರಕ್ಷಣೆ ಅಗತ್ಯ ಕಾರ್ಯಾಗಾರ ಮತ್ತು ಮಾಹಿತಿ ನೀಡಲಾಯಿತು.
ಸಿರಿಧಾನ್ಯಗಳು ಸಾಂಪ್ರದಾಯಕ ಬೆಳೆ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದು, ಸ್ಥಳೀಯವಾಗಿ ಆಹಾರ ವೈವಿಧ್ಯತೆ ಹಾಗೂ ಸುಭದ್ರತೆಯನ್ನು ಒದಗಿಸುತ್ತದೆ. ಕಡಿಮೆ ಆಳದ ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿಯೂ ಇವುಗಳನ್ನು ಬೆಳೆಯಬಹುದು, ಅಲ್ಪಾವಧಿ ಬೆಳೆ, ಮಳೆಯಾಶ್ರಿತ ಪ್ರದೇಶಗಳಿಗೆ ಸೂಕ್ತ. ಬರಸಹಿಷ್ಣು ಬೆಳೆಗಳು, ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಬೆಳೆಗಳು ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಕಡಿಮೆ ಉತ್ಪಾದನಾ ವೆಚ್ಚ ಮತ್ತು ಉತ್ತಮ ಇಳುವರಿ ಕೊಡಬಲ್ಲ ಪರಿಸರ ಸ್ನೇಹಿ ಬೆಳೆಗಳು. ಸತ್ವಯುತ ಆಹಾರಗಳು, ಗಾತ್ರದಲ್ಲಿ ಕಿರಿದಾದರು ಪೋಷಣಾ ಮೌಲ್ಯದಲ್ಲಿ ಹಿರಿಯದು.
ಈ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕತೆಗೆ ಹೆಸರಾಗಿವೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನಾಂಶ, ಈ ಗುಂಪಿನ ಜೀವಸತ್ವಗಳು, ಆಗತ್ಯ ಅಮೈನೋ ಆಮ್ಲಗಳು, ಪೋಲಿಕ್ ಆಮ್ಲ ಹಾಗೂ ಜೀವಸತ್ವ ‘ಇ’ ಅಂಶಗಳಿಂದ ಕೂಡಿದ್ದು, ಹೆಚ್ಚು ಪೌಷ್ಟಿಕವಾಗಿದೆ. ಸಿರಿಧಾನ್ಯಗಳಲ್ಲಿ ಕಬ್ಬಿಣಾಂಶ, ಮೆಗ್ನಿಶಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಸಿಯಂ ಹಾಗೂ ಪೊಟ್ಯಾಷಿಯಂ ಅಂಶಗಳು ಹೇರಳವಾಗಿದೆ. ಆದ್ದರಿಂದ ಈ ಧಾನ್ಯಗಳನ್ನು ‘ನ್ಯೂಟ್ರಿ-ಸೀರಿಯಲ್ಸ್’ ಅಥವಾ ‘ಸಿರಿಧಾನ್ಯಗಳು’ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಉತ್ಕೃಷ್ಟ ಆಹಾರ ಅಥವಾ ವಿಸ್ಮಯ ಧಾನ್ಯಗಳೆಂದೇ ಪರಿಗಣಿಸಲಾಗಿದೆ. ಇವು ಗೂಟೆನ್ ಮುಕ್ತ ಧಾನ್ಯಗಳು, ಒಂದು ಕಾಲದಲ್ಲಿ ಬಡವರ ಆಹಾರವಾಗಿದ್ದ ಈ ಆಹಾರಗಳು ಸೂಪರ್ ಫುಡ್ ಮತ್ತು ಶ್ರೀಮಂತರ ಆಹಾರವಾಗಿದೆ. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳಿನ ಬೇನೆ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ. ಇಷ್ಟೆಲ್ಲಾ ಪೌಷ್ಟಿಕತೆಯನ್ನು ಹೊಂದಿದ್ದರೂ ಸಹ ಇವುಗಳು ಹೆಚ್ಚಿನ ಬಳಕೆ ಬೆಳೆಯುವ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿದೆ. ಸಿರಿಧಾನ್ಯಗಳ ಬಳಕೆಯನ್ನು ಸಿದ್ಧ ಆಹಾರ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಿ, ಜನಪ್ರಿಯಗೊಳಿಸುವುದರಿಂದ ಬಳಕೆಯನ್ನು ಹೆಚ್ಚಿಸಬಹುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ರಾಗಿ ಸಾಮೆ, ಬರಗು, ನವಣೆ, ಹಾರಕ, ಕೊರಲೆ, ಊದಲು, ಸಜ್ಜೆ, ಮತ್ತು ಜೋಳ ಇವುಗಳನ್ನು ‘ಸಿರಿಧಾನ್ಯ’ ಎಂದು ಕರೆಯುತ್ತಾರೆ ಚಿಕ್ಕ ಕಾಳಿನ ಈ ಧಾನ್ಯಗಳು ಆರೋಗ್ಯದ ದೃಷ್ಟಿಯಿಂದ ಬಹು ದೊಡ್ಡ ಗುಣಹೊಂದಿವೆ.
ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳು
ಸಿರಿಧಾನ್ಯಗಳಲ್ಲಿ ಶೇ. 10-15 ರಷ್ಟಿರುವ ನಾರಿನಾಂಶ ಸಣ್ಣ ಕರುಳಿನ ಕ್ರಿಯೆಗೆ ಸಹಕರಿಸುತ್ತದೆ. ಮಲ ವಿಸರ್ಜನೆಗೆ ಸಿರಿಧಾನ್ಯಗಳ ಆಹಾರ ಪೂರಕ, ಅಲ್ಲದೆ ಮೂಲವ್ಯಾಧಿ ಬರದಂತೆ ತಡೆಯುತ್ತದೆ. ಐಸೋಪ್ಲೇವೋನ್, ಲಿಗ್ನಿನ್ಗಳಂತಹ ಸಸ್ಯಜನ್ಯ ಪ್ರಚೋದಕಗಳು ದೈಹಿಕ ಮತ್ತು ಮಾನಸಿಕ ತೊಂದರೆ ವಿರುದ್ಧ ರಕ್ಷಣೆ ನೀಡುತ್ತದೆ. ಸಿರಿಧಾನ್ಯಗಳಲ್ಲಿರುವ ಸಂರಕ್ಷಕ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ನಿಯಮಿತ ಸೇವನೆಯಿಂದ ಸೋಂಕು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ನಿಧಾನವಾಗಿ ಜೀರ್ಣವಾಗುವ, ಹೀರಲ್ಪಡುವ ಮತ್ತು ಹಂತ ಹಂತವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುವ ವಿಶಿಷ್ಟಗುಣವುಳ್ಳ ಶರ್ಕರಪಿಷ್ಟ ಸಿರಿಧಾನ್ಯದ್ದು, ಆದ್ದರಿಂದಲೇ ಇದು ಮಧುಮೇಹಿಗಳಿಗೆ ಹೆಚ್ಚು ಉಪಯುಕ್ತ ಆಹಾರ ಅಲ್ಲದೇ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಸಿರಿಧಾನ್ಯಗಳ ಇನ್ನೊಂದು ವೈಶಿಷ್ಠತೆಯೆಂದರೆ, ಇವುಗಳ ಹಸಿವನ್ನು ನೀಗಿಸುವ ಸಾಮರ್ಥ್ಯ, ‘ಸಿರಿಧಾನ್ಯ’ಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಇಲ್ಲದಿರುವುದು ಮತ್ತು ಬಡವರ ಆಹಾರ ಎಂಬ ಭಾವನೆ ಇರುವುದರಿಂದ ಇವುಗಳ ಬಳಕೆ. ಕ್ರಮೇಣವಾಗಿ ಮಾಯವಾಗಿದ್ದವು. ಆದರೆ ಹಲವಾರು ಸತ್ವಗಳು ಹೇರಳವಾಗಿರುವ ಈ ಸಿರಿಧಾನ್ಯಗಳನ್ನು ಎಲ್ಲಾ ವಯಸ್ಸಿನವರು ಸೇವಿಸಿ ಇದರ ಉಪಯೋಗವನ್ನು ಪಡೆಯಬಹುದು ಎಂಬ ಅರಿವು ಮೂಡಿದ್ದರಿಂದ, ಇತ್ತೀಚಿನ ದಿನಗಳಲ್ಲಿ ಮತ್ತೆ ನಮ್ಮ ಆಹಾರದಲ್ಲಿ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ. ಡಾ. ಕೆ. ವಿದ್ಯಾಕುಮಾರಿ, ಭಾ.ಆ.ಸೇ.ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ನೇತೃತ್ವ ದಲ್ಲಿ ಕಾರ್ಯಕ್ರಮ ನಡೆಯಿತು.
ಶ್ರೀ ಚಂದ್ರಶೇಖರ ನಾಯ್ಕ ಉಪ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ, ಶ್ರೀಮತಿ ಪೂರ್ಣಿಮಾ ಜಿ.ಸಿ.ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ ಸಹಾಯಕ ಕೃಷಿ ನಿರ್ದೇಶಕರು (ಉಡುಪಿ, ಕುಂದಾಪುರ, ಕಾರ್ಕಳ)
ಅಧಿಕಾರಿಗಳು ಸಿಬ್ಬಂದಿ ವರ್ಗದವರು ಕೃಷಿ ಇಲಾಖೆ, ಉಡುಪಿ ಜಿಲ್ಲೆ. ನೂರಾರು ಕೃಷಿಕರು ಪಾಲ್ಗೊಂಡರು. ಕೃಷಿ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಸನ್ಮಾನಿಸಲಾಯಿತು.