ಉಜಿರೆ:(ಜ.12) ನಮ್ಮ ದೇಶದ ಸಂಸ್ಕೃತಿ, ಆಧ್ಯಾತ್ಮಿಕತೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿ ಭಾರತದ ಬಗ್ಗೆ ಕೀಳು ಭಾವನೆ ಹೊಂದಿದ್ದ ಪಾಶ್ಚಾತ್ಯರು ನಮ್ಮೆಡೆಗೆ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು.
ಇದನ್ನೂ ಓದಿ: ಬಂದಾರು : ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶೋತ್ಸವ
ಅಜ್ಞಾನವೇ ದೌರ್ಬಲ್ಯ ; ದೌರ್ಬಲ್ಯವೇ ಸೋಲಿನ ಮೂಲ. ಆದ್ದರಿಂದ ಸರಿಯಾದ ಶಿಕ್ಷಣವನ್ನು ಪಡೆದು ಪ್ರಬುದ್ಧರಾಗಬೇಕು ಹಾಗೂ ಹಕ್ಕಿಯೊಂದು ಸರಿಯಾಗಿ ಹಾರಬೇಕೆಂದರೆ ಅದರ ಎರಡೂ ರೆಕ್ಕೆಗಳು ಬಲಿಷ್ಠವಾಗಿರಬೇಕು. ಒಂದು ರೆಕ್ಕೆ ಪುರುಷನಾದರೆ ಇನ್ನೊಂದು ಸ್ತ್ರೀ ಆಗಿರಬೇಕು. ಸ್ತ್ರೀ ಸಮಾನತೆಗೆ ಮಹತ್ವ ಕೊಡುವ ದೇಶ ಮಾತ್ರ ಸರ್ವಾಂಗೀಣ ಪ್ರಗತಿ ಸಾಧಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.
ಯುವಶಕ್ತಿ ದೇಶದ ಶಕ್ತಿ. ಸತ್ಯ ಮತ್ತು ಧೈರ್ಯದಿಂದ ಸಾಧನೆ ಮಾಡಬೇಕು. ವಿದ್ಯಾರ್ಥಿ ಸಮುದಾಯ ದುಶ್ಚಟ ಮತ್ತು ಆಕರ್ಷಣೆಗಳಿಂದ ವಿಮುಖರಾಗಿ ಸ್ವಾಮಿ ವಿವೇಕಾನಂದರು ಯುವಕರಿಗೆ ನೀಡಿದ ಅದ್ಭುತ ಸಂದೇಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಲ್ಲಿ ತಮ್ಮ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಮನೋಹರ ಶೆಟ್ಟಿ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಯುವದಿನದ ಸಂದೇಶ ನೀಡಿದರು.
ಸದ್ಭಾವನೆಯ ಗೋಡೆಯಾದ ಎಸ್ ಡಿ ಎಂ ವಾಲ್ ಆಫ್ ಗುಡ್ ವಿಲ್ ಇದಕ್ಕೆ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಗ್ರಂಥಪಾಲಕ ಮನೋಹರ ಶೆಟ್ಟಿ , ಘಟಕದ ನಾಯಕ ಆದಿತ್ಯ ವಿ , ನಾಯಕಿ ಪ್ರಾಪ್ತಿ ಗೌಡ ಹಾಗೂ ಸ್ವಯಂ ಸೇವಕರು ಅಗತ್ಯ ವಸ್ತುಗಳನ್ನು ನೀಡಿದರು.
ಯುವದಿನದ ಅಂಗವಾಗಿ ಸ್ವಯಂ ಸೇವಕರು ಉಜಿರೆ ಪರಿಸರದ ಸ್ವಚ್ಛತಾ ಕಾರ್ಯವನ್ನು ಸಹ ಮಾಡಿದರು.
ಸ್ವಯಂ ಸೇವಕರಾದ ರಾಶಿಕ ಸ್ವಾಗತಿಸಿ , ವಿನೋದ್ ವಂದಿಸಿದರು. ಮೌಲ್ಯ ನಿರೂಪಿಸಿದರು.