Mon. Jan 13th, 2025

Belthangady: ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಮುಂಡಾಜೆ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು – ಬೆಳ್ಳಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

ಬೆಳ್ತಂಗಡಿ(ಯು ಪ್ಲಸ್ ಟಿವಿ):(ಜ.13) ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದ 19ರ ವಯೋಮಾನದ ಬಾಲಕಿಯರ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ಸಹನಾ, ವರ್ಷಾ.ಪಿ, ಅಂಜಲಿ, ಎಮ್,ಎಚ್ ಅನ್ವಿತ, ಧನ್ಯ, ಬಿ.ಕೆ ಕೀರ್ತಿ ಅವರನ್ನು ಉಜಿರೆ ಪೇಟೆಯಿಂದ ಕಾಲೇಜಿನವರೆಗೆ ಇಂದು ತೆರೆದ ವಾಹನದ ಮೂಲಕ ಹೂ ಹಾರಗಳನ್ನು ಹಾಕಿ, ತಿಲಕವಿಟ್ಟು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಇದರಲ್ಲಿ ತಂಡದ ನಾಯಕಿ ಕುಮಾರಿ ಸಹನಾ ಅವರು ತಂಡವನ್ನು ನಡೆಸಿದ್ದು ಸಹ ಆಟಗಾರರಾಗಿ ಕುಮಾರಿ ವರ್ಷ, ಕುಮಾರಿ ಅಂಜಲಿ, ಕುಮಾರಿ ಅನ್ವಿತಾ, ಕುಮಾರಿ ಕೀರ್ತಿ ಹಾಗೂ ಧನ್ಯ, ಭಾಗವಹಿಸಿದ್ದರು. ಇದರಲ್ಲಿ ಕ್ರೀಡಾಪಟುಗಳಾದ ಸಹನಾ, ವರ್ಷ.ಪಿ, ಎಮ್.ಎಚ್ ಅನ್ವಿತಾ, ಅಂಜಲಿ ಇವರುಗಳು ಎಪ್ರಿಲ್ ನಲ್ಲಿ ಡೆಲ್ಲಿಯಲ್ಲಿ ನಡೆಯುವ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಿಂದ ಇಂಡಿಯಾ ವಾಲಿಬಾಲ್ ತರಬೇತಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಗುಣಪಾಲ್ ಎಂ.ಎಸ್, ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕರಾದ ಸಂದೀಪ್ ಶೆಟ್ಟಿಯವರು ತರಬೇತಿಯನ್ನು ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನಯ ಚಂದ್ರ,

ಕಾರ್ಯದರ್ಶಿ ನಾರಾಯಣಗೌಡ ಕೊಳಂಪೆ, ಶತಾಬ್ಧಿ ಶಿಕ್ಷಣ ಸಂಸ್ಥೆಯ ಸಂಚಾಲಕ ನಾರಾಯಣ್ , ಉಪ ಪ್ರಾಂಶುಪಾಲೆ ಗೀತಾ, ಉಪನ್ಯಾಸಕ ವರ್ಗ, ಆಡಳಿತ ಮಂಡಳಿಯ ಅಧಿಕಾರಿಗಳು, ಅಧ್ಯಕ್ಷರು, ಸರ್ವ ಸದಸ್ಯರು ,ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ವಿರಾಟ್ ಹಿಂದೂ ಸಂಘಟನೆ ಮುಂಡಾಜೆ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು,ಮುಂಡಾಜೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *