ಬೆಳ್ತಂಗಡಿ:(ಜ.13) ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಇಂದಿರಾ ನಗರ, ಬೆಂಗಳೂರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ಇವರ ಸಹಯೋಗದಲ್ಲಿ
ಇದನ್ನೂ ಓದಿ: Kadaba: ಹಾಡುಹಗಲೇ ಮನೆಗೆ ನುಗ್ಗಿ ನಗ-ನಗದು ಕಳವು
ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿ ಎಸ್ ಆರ್ ಫಂಡ್ ನಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಲಾಯಿಲದಲ್ಲಿ ನವೀಕರಣಗೊಂಡ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಔಪಾಚಾರಿಕ ಸಭೆಯ ಉದ್ಘಾಟನೆಯನ್ನು ಗಣ್ಯರು ನೆರವೇರಿಸಿದರು. ಈ ವೇಳೆ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ನ ಡಿಜಿಎಂ ಪ್ರಶಾಂತ್ ಜೋಶಿ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಪ್ರಶಾಂತ್ ಜೋಶಿ , ನನಗೆ ಈ ಶಾಲೆಗೆ ಕಿಂಚಿತ್ತು ಕೊಡುವ ಭಾಗ್ಯ ಸಿಕ್ಕಿದೆ. ನಾನು ಶ್ರೀಕಾರ ಹಾಕಿದ್ದು ಮಾತ್ರ ಎಂದರು.
ಇನ್ನು ಮೋಹನ್ ಕುಮಾರ್ ಈ ಕಾಮಗಾರಿಯನ್ನು ಮಾಡುತ್ತಿದ್ದಾರೆ ಅಂದಾಗ ನನಗೆ ವಿಭಿನ್ನತೆ ಇರುತ್ತದೆ ಎನ್ನುವ ಅಂದಾಜು ಇತ್ತು , ಇದು ನಮಗೆ ಇಲ್ಲಿ ಕಾಣಿಸುತ್ತಾ ಇದೆ ಎಂದರು. ಶಾಲೆಯ ನವೀಕರಣ ಆದ್ರೆ ವಾತಾವರಣ ಬದಲಾಗುತ್ತೆ ಮಕ್ಕಳು ಕೂಡ ಹೆಚ್ಚಾಗಿ ಬರುತ್ತಾರೆ. ಈ ಬದಲಾವಣೆ ಇಲ್ಲಿ ಕಾಣಿಸುತ್ತಾ ಇದೆ ಎಂದರು.
ಬಳಿಕ ಮಾತನಾಡಿದ ಬದುಕು ಕಟ್ಟೋಣ ಬನ್ನಿ ಸಂಚಾಲಕ ಮೋಹನ್ ಕುಮಾರ್ , ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ನನಗೆ ಹೆಮ್ಮೆ ಹಾಗೂ ಖುಷಿ ತಂದಿದೆ ಎಂದರು. ಈ ಶಾಲೆಯ ಅಭಿವೃದ್ಧಿ ವಿಚಾರಕ್ಕೆ ನನಗೆ ವಕೀಲರಾದ ಧನಂಜಯ್ ರಾವ್ ಅವರು ಕರೆ ಮಾಡಿ ತಿಳಿಸಿದ್ದರು. ನನ್ನ ಸೇವೆಗೆ ಹೊಸ ಚಿತ್ರಣ ಕೊಟ್ಟಿದ್ದು ಧನಂಜಯ್ ರಾವ್ ಅಂದರು. ಕ್ಯಾನ್ ಫಿನ್ ಹೋಮ್ಸ್ ಅವರ ಹಣವನ್ನು ಕಟ್ಟಡದ ಕಾಮಗಾರಿಗೆ ಬೇಕಾದ ಸಲಕರಣೆಗಾಳಿಗೆ ಬಳಕೆ ಮಾಡಲಾಗಿದೆ. ಭಾರೀ ಜವಾಬ್ದಾರಿಯುತವಾಗಿ ಈ ಹಣವನ್ನು ಬಳಕೆ ಮಾಡಲಾಗಿದೆ ಎಂದರು. ಇಲ್ಲಿನ ಹಳೆ ವಿದ್ಯಾರ್ಥಿಗಳು ಕೂಡ ನಮ್ಮ ಜೊತೆ ಕೈ ಜೋಡಿಸಿದ್ದರು, ಶ್ರಮಿಸುತ್ತಿದ್ದರು ಎಂದರು. ಇಲ್ಲಿ ವರ್ಣ ಚಿತ್ರಗಳನ್ನು ಮಾಡಲಾಗಿದೆ , ವಿಜ್ಞಾನದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಈ ವರ್ಣ ಚಿತ್ರಗಳನ್ನು ರಚಿಸಲಾಗಿದೆ ಎಂದರು.
ಇದೇ ವೇಳೆ ಶಿಕ್ಷಕರ ಬಳಿ ಮನವಿ ಮಾಡಿದ ಮೋಹನ್ ಕುಮಾರ್ , ಈ ಚಿತ್ರಗಳು, ಕಟ್ಟಡವನ್ನು ಉಳಿಸುವಂತಹ ಕೆಲಸ ಆಗಬೇಕು, ಇದು ಗ್ರಾಮೀಣ ಮಕ್ಕಳ ಭವಿಷ್ಯ ಎಂದರು. ಇದೇ ವೇಳೆ ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರನ್ ವರ್ಮ ಮತ್ತು ಅನಂತ್ ಭಟ್ ಮಚ್ಚಿಮಲೆ ಅವರಿಗೆ ಶಾಲೆ ವತಿಯಿಂದ ಸನ್ಮಾನ ಮಾಡಲಾಯಿತು. ಗೌರವಾರ್ಪಣೆ ಕಾರ್ಯಕ್ರಮವನ್ನು ಖ್ಯಾತ ವಕೀಲರಾದ ಧನಂಜಯ್ ರಾವ್ ಅವರು ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲಾಯಿಲ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಸಂಘ ಸಂಸ್ಥೆಗಳು ಸೇರಿಕೊಡು ಒಂದೊಳ್ಳೆ ಕೆಲಸವನ್ನು ಮಾಡಿದ್ದೀರಿ ನಿಮಗೆ ಧನ್ಯವಾದಗಳು ಎಂದರು. ನನ್ನ ಮಕ್ಕಳಿಗೆ ಎಲ್ಲಿಯೂ ಸರಿಯಾದ ವ್ಯವಸ್ಥೆ ಇರಲಿಲ್ಲ , ಮೈದಾನ ಇರಲಿಲ್ಲ , ವಾತಾವರಣ ಚೆನ್ನಾಗಿರಲಿಲ್ಲ ಆದರೆ ಈಗ ಬದಲಾಗಿದೆ. ನೋಡಲು ಆನಂದವಾಗುತ್ತಿದೆ ಎಂದರು. ಕಾರ್ಯಕ್ರಮವನ್ನು ಉಷಾ ನಿರೂಪಿಸಿದರು.
ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಸ್ವಾಗತಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಧನ್ಯವಾದ ನೀಡಿದರು. ಈ ವೇಳೆ ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಗಂಧಿ ಜಗನ್ನಾಥ್, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರನ್ ವರ್ಮ , ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ , ರೋಟರಿ ಕ್ಲಬ್ ಇಂದಿರಾನಗರ ಅಧ್ಯಕ್ಷರಾದ ಸುಪ್ರಿಯಾ ಕಂಧಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೌಮ್ಯ , ಖ್ಯಾತ ವಕೀಲರಾದ ಧನಂಜಯ್ ರಾವ್ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಾ ಕೇಸರಿ , ವಿದ್ಯಾ ಕುಮಾರ್ , ಸಂದೇಶ್ , ಅನಂತ್ ಭಟ್ ಮಚ್ಚಿಮಲೆ , ಗಣೇಶ್ ಆರ್ , ಜಗದೀಶ್ ಮುಗುಳಿ , ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.