Mon. Jan 13th, 2025

Mangaluru:  ಸಂತ ಆನ್ಸ್ ನರ್ಸಿಂಗ್ ಕಾಲೇಜು ಮೂಲ್ಕಿ ಇದರಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ

ಮಂಗಳೂರು:(ಜ.13) ಸಂತ ಅನ್ಸ್ ನರ್ಸಿಂಗ್ ಕಾಲೇಜು ಮೂಲ್ಕಿ ಇದರ ವಿದ್ಯಾರ್ಥಿನಿ ಅಲಫಾಂಜ್ ದ್ವಿತೀಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು, ಆದರೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯ ಪೂರ್ಣ ಪ್ರಮಾಣದ ಶುಲ್ಕವನ್ನು ಪಡೆದುಕೊಂಡು

ಇದನ್ನೂ ಓದಿ: ಉಜಿರೆ: (ಜ.17-ಜ.18) ಎಸ್ ಡಿ ಎಂ ಕಾಲೇಜಿನಲ್ಲಿ “ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ” ಕುರಿತು ಅಂತರಾಷ್ಟ್ರೀಯ ವಿಚಾರ ಸಂಕಿರಣ

ವಿನಾಕಾರಣ ವಿದ್ಯಾರ್ಥಿನಿಯನ್ನು ಅಕ್ಟೋಬರ್ 5 ರಂದು ಕಾಲೇಜಿನಿಂದ ಹೊರಹಾಕಿದ್ದಾರೆ. ಕಾಲೇಜಿನಿಂದ ಹೊರ ಹಾಕಿ 3 ತಿಂಗಳು ಕಳೆದರೂ ವಿದ್ಯಾರ್ಥಿನಿಯ ಎಸ್. ಎಸ್. ಲ್ ಸಿ ಹಾಗೂ ಪಿ. ಯು. ಸಿ ದಾಖಲೆಗಳನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ.

ಈ ರೀತಿಯ ಸಮಸ್ಯೆಗಳನ್ನು ಅನೇಕ ವಿದ್ಯಾರ್ಥಿ ಗಳು ಅನುಭವಿಸುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಈ ಬಗ್ಗೆ ಕೂಡಲೇ ಕ್ರಮವನ್ನು ತೆಗೆದುಕೊಂಡು ,

ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಮಂಗಳೂರಿನ ಅಪಾರ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮನವಿ ಮಾಡಲಾಯಿತು .

Leave a Reply

Your email address will not be published. Required fields are marked *