ಮೈರೋಳ್ತಡ್ಕ :(ಜ.13) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ. ) ಕಣಿಯೂರು ವಲಯದ ಮೈರೋಳ್ತಡ್ಕ ಒಕ್ಕೂಟದ ವತಿಯಿಂದ ಮಕರ ಸಂಕ್ರಾಂತಿ ಪ್ರಯುಕ್ತ ಕುರಾಯ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಧಾರ್ಮಿಕ ಶ್ರದ್ದಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಇದನ್ನೂ ಓದಿ: ಕಲ್ಮಂಜ : ಪಜಿರಡ್ಕ ದೇವಸ್ಥಾನದಲ್ಲಿ ಶ್ರಮದಾನ
ದೇವಾಲಯದ ಒಳಾಂಗಣವನ್ನು ಗುಡಿಸಿ ತೊಳೆದು ಸ್ವಚ್ಚ ಗೊಳಿಸಲಾಯಿತು ಮತ್ತು ದೇವಾಲಯದ ಹೊರಾಂಗಣ ದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ತೆಗೆದು ಗುಡಿಸಿ ಸ್ವಚ್ಛಗೊಳಿಸಲಾಯಿತು.
ಈ ಶ್ರಮದಾನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾಬು ಗೌಡ, ಒಕ್ಕೂಟದ ಅಧ್ಯಕ್ಷರಾದ ಸುಂದರ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ಒಕ್ಕೂಟ ದ ಪದಾಧಿಕಾರಿಗಳು, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದರು. ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ವ್ಯವಸ್ಥಾಪನ ಸಮಿತಿಯವರು ಧನ್ಯವಾದ ಸಲ್ಲಿಸಿದರು.