ಕೋಟ:(ಜ.14) ಇಂಜೆಕ್ಷನ್ ಹಾಕಿದ ನಂತರ ಎರಡೂವರೆ ತಿಂಗಳ ಮಗುವಿಗೆ ಜ್ವರ ಬಂದಿದ್ದು ನಂತರ ಮಗುವಿನ ಚಟುವಟಿಕೆಯಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದೆ.
ಮೃತ ಮಗು ದುವಿತ್ ಗೆ ಜನವರಿ 10 ರಂದು ಇಂಜೆಕ್ಷನ್ ಹಾಕಿದ್ದು ಅದೇ ದಿನ ಸಂಜೆ ಜ್ವರ ಬಂದಿದೆ. ಆ ಸಮಯ ಜ್ವರದ ಔಷದಿ ನೀಡಿದ್ದು ಸ್ವಲ್ಪ ಕಡಿಮೆ ಆಗಿದೆ. ಜನವರಿ 13 ರಂದು ಮಗುವಿನ ಚಟುವಟಿಕೆಯಲ್ಲಿ ಬಹಳ ವ್ಯತ್ಯಾಸ ಕಂಡುಬಂದ ಕಾರಣ
ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಗುವಿನ ಉಸಿರಾಟ ನಿಂತಿರುವುದು ಗಮನಕ್ಕೆ ಬಂದಿದೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮಗುವು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ: 02/2024 ಕಲಂ:194 BNSS ರಂತೆ ಪ್ರಕರಣ ದಾಖಲಾಗಿದೆ.