ಮಂಗಳೂರು :(ಜ.14) ಸೇವೆಯ ಪರಮ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ “ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು” ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯದಲ್ಲಿ ಹಲವಾರು ಕುಟುಂಬಕ್ಕೆ ನೇರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ. 75ನೇ ಮಾಸಿಕ ಯೋಜನೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಅಮೃತ ಸೇವಾ ಮಹೋತ್ಸವ ನಡೆಯಲಿದೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ, ಜೈ ಶ್ರೀ ರಾಮ್ ಶಾಖೆ ಎಡಪದವು ಇದರ ಆಶ್ರಯದಲ್ಲಿ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 75ನೇ ಮಾಸಿಕ ಯೋಜನೆಯ ಅಂಗವಾಗಿ ಎ.ಜೆ ಹಾಸ್ಪಿಟಲ್ ಮಂಗಳೂರು ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ 12 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ ಅಮೃತ ಸೇವಾ ಮಹೋತ್ಸವ ಸಭಾ ಕಾರ್ಯಕ್ರಮ, ಸೇವಾ ಯೋಜನೆ ಹಸ್ತಾಂತರ ದಿನಾಂಕ : 19-01-2025 ಆದಿತ್ಯವಾರ ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನ, ಎಡಪದವು ಇಲ್ಲಿ ನಡೆಯಲಿದೆ.
“ಬಜರಂಗದಳ ಸೇವಾ ಬ್ರಿಗೇಡ್ ಎಡಪದವು” ತನ್ನ ಸೇವಾ ಪಯಣದಲ್ಲಿ 44 ಮಾಸಿಕ ಸೇವಾ ಯೋಜನೆಯ ಮೂಲಕ 165 ಕುಟುಂಬಗಳಿಗೆ 52 ಲಕ್ಷ ರೂಪಾಯಿಗಳಿಗೂ ಅಧಿಕ ಸಹಾಯಧನವನ್ನು ಸೇವಾ ರೂಪದಲ್ಲಿ ಸಮಾಜಕ್ಕೆ ನೀಡಿದೆ. ಸುಮಾರು ಏಳು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಯ ಸೇವಾ ಕಾರ್ಯ ನಿಜಕ್ಕೂ ಮಾದರಿ.
ಸದ್ಯ ದಿನಾಂಕ : 19-01-2025 ಆದಿತ್ಯವಾರ ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನ, ಎಡಪದವು ಇಲ್ಲಿ ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಾಗೂ 12 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ ಅಮೃತ ಸೇವಾ ಮಹೋತ್ಸವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.