Tue. Jan 21st, 2025

Udupi: ನೇಣುಬಿಗಿದುಕೊಂಡು ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಉಡುಪಿ(ಜ.14): ಆದರ್ಶ್ ಆಸ್ಪತ್ರೆಯ ಬಳಿ ಇರುವ, ವಸತಿ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಗೋಪಾಲ ಕೃಷ್ಣ ಪ್ರಭು ಎನ್ನುವರು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕೋಟ: ಇಂಜೆಕ್ಷನ್‌ ನೀಡಿದ ಬಳಿಕ ಮಗುವಿಗೆ ಜ್ವರ

ಮೃತ ವ್ಯಕ್ತಿ ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ. ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ನಗರ ಪೋಲಿಸ್ ಠಾಣೆಯ‌ ಎ ಎಸ್ ಐ ಜಯಕರ್ ಹಾಗೂ ಸಿಬ್ಬಂದಿಗಳು ಮಹಜರು ಪ್ರಕ್ರಿಯೆ ನಡೆಸಿದರು.‌‌

ಮರಣೋತ್ತರ ಪರೀಕ್ಷೆಗೆ ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.

Leave a Reply

Your email address will not be published. Required fields are marked *