ಉಜಿರೆ:(ಜ.14) ಉಜಿರೆಯ ಅಮೃತ್ ಸಿಲ್ಕ್ಸ್ ಬಳಿ ಇರುವ ಕೆ.ಎನ್.ಎಸ್.ಟವರ್‌ನಲ್ಲಿ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಜ.14 ರಂದು ಶುಭಾರಂಭಗೊಂಡಿತು.
ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್, ಕಾಲ ಭೈರವೇಶ್ವರ ಒಕ್ಕಲಿಗ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಉಜಿರೆ ಇದರ ಅಧ್ಯಕ್ಷರಾದ ರಂಜನ್ ಜಿ.ಗೌಡ,
ಕೆನರಾ ಬ್ಯಾಂಕ್ ಬೆಳ್ತಂಗಡಿ ಇದರ ಶಾಖಾ ಪ್ರಬಂಧಕರಾದ ಪ್ರತಾಪ್ ನಾಯಕ್ ಕೆ, ಕೆ.ಎನ್ .ಎಸ್ ಟವರ್ ಉಜಿರೆ ಇದರ ಮಾಲಕರಾದ ಮೋಹನ್ ಶೆಟ್ಟಿಗಾರ್,
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾಕಿರಣ್ ಕಾರಂತ್ ಪಾಲ್ಗೊಂಡಿದ್ದರು. ಈ ಸಂದರ್ಭ ಇದರ ಮಾಲಕಿಯಾದ ಶ್ರೀಮತಿ ನೇತ್ರಾ ಶಶಿಕುಮಾರ್ ಮತ್ತು ಅವರ ಬಂಧು- ಬಳಗ, ಕುಟುಂಬಸ್ಥರು ಉಪಸ್ಥಿತರಿದ್ದರು.