ಉಜಿರೆ (ಜ.14):ಮಧ್ಯಪ್ರದೇಶದ ಭೂಪಾಲ್ ನ ರವೀಂದ್ರ ಭವನದಲ್ಲಿ ಜನವರಿ 3 ರಿಂದ 6 ರವರೆಗೆ ನಡೆದಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ)ದ, ವಿದ್ಯಾರ್ಥಿಯಾದ 10ನೇ ತರಗತಿಯ ಅಧಿಶ್ ಬಿ. ಸಿ.ಹಿರಿಯ ವಿಭಾಗದಲ್ಲಿ ಭಾಗವಹಿಸಿ ” ವ್ಯಾಲ್ಯೂ ಎಡಿಶನ್ ಫಾರ್ ಅಗ್ರಿಕಲ್ಚರ್ ವೇಸ್ಟ್ ಅಂಡ್ ವೀಡ್ಸ್ ” ಎಂಬ ವಿಜ್ಞಾನದ ಸಂಶೋಧನೆಯನ್ನು ಮಂಡಿಸಿದ್ದಾರೆ.
ಇದನ್ನೂ ಓದಿ: ಉಜಿರೆ: ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ (INSEF)
ಕಿರಿಯ ವಿಭಾಗದಲ್ಲಿ 9ನೇ ತರಗತಿಯ ಸಚಿತ್ ಭಟ್ ಭಾಗವಹಿಸಿ ” ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ಫ್ರಮ್ ಅನ್ಯೂಸ್ಡ್ ಬನಾನಾ ಫೈಬರ್ಸ್” ಎಂಬ ಸಂಶೋಧನೆಯನ್ನು ಮಂಡಿಸಿರುತ್ತಾರೆ. ಈ ಎರಡು ವಿದ್ಯಾರ್ಥಿಗಳ ಸಂಶೋಧನೆಯು ಅತ್ಯುತ್ತಮ ಸಂಶೋಧನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳಾದ 10ನೇ ತರಗತಿಯ ಆಲಾಪ್ ಎಂ ಮತ್ತು 9ನೇ ತರಗತಿಯ ಸುಜನ್ ಗೌಡ ರೊಂದಿಗೆ ಜೊತೆಯಾಗಿ ಸಂಶೋಧನೆಯನ್ನು ನಡೆಸಿರುತ್ತಾರೆ.
ಈ ಸಂಶೋಧನೆಗಳಿಗೆ ಮಾರ್ಗದರ್ಶಿ ಶಿಕ್ಷಕರಾಗಿ ಶ್ರೀಮತಿ ಧನ್ಯವತಿ.ಕೆ ಮತ್ತು ಶ್ರೀಮತಿ ಶೋಭಾ.ಎಸ್ ಕಾರ್ಯನಿರ್ವಹಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.