ಕಾರ್ಕಳ : (ಜ.15) ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿಯು ಕೆಎ.19 ಡಿ. 9245 ನೇ ನಂಬರಿನ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು.
ಇದನ್ನೂ ಓದಿ: ಹುಬ್ಬಳ್ಳಿ: ಗರ್ಲ್‌ಫ್ರೆಂಡ್‌ನ ಖಾಸಗಿ ವಿಡಿಯೋ, ಫೋಟೋ ಶೇರ್ ಮಾಡಿ ಪ್ರಿಯಕರ ಆತ್ಮಹತ್ಯೆ!
ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧವನ್ನು ಉಂಟು ಮಾಡಲು ಟಿಪ್ಪರ್ ಲಾರಿಗೆ ಬೆಂಗಾವಲು ಮಾಡುತ್ತಿದ್ದ ಕೆಎ19 ಎಮ್‌ಬಿ. 7472 ನೇ ನಂಬ್ರದ ರಿಡ್ಜ್ ಕಾರು ಚಾಲಕ ಟಿಪ್ಪರ್ ಲಾರಿ ಬೆನ್ನಟ್ಟುವಾಗ
ಒಮ್ಮೆಲೇ ಇಲಾಖಾ ವಾಹನದ ಮುಂದೆ ಚಲಾಯಿಸಿ ಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ಆರೋಪಿತರು ಸಂಘಟಿತರಾಗಿ ಕೃತ್ಯ ಉಂಟು ಮಾಡಿ ತಡೆಯುಂಟು ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಆರೋಪಿ ಸೈಯದ್ ಸೈಫ್ (22) ಬಂಧಿಸಲಾಗಿದೆ. ಆರೋಪಿಯು ಬಿ. ಫಾರ್ಮ್ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.