Fri. Jan 17th, 2025

Belthangadi: ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ:(ಜ.17) ಜ. 31 ರಿಂದ ಫೆ.04ರ ತನಕ ನಡೆಯಲಿರುವ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಬಿಡುಗಡೆ ಜ.15 ರಂದು ನಡೆಯಿತು.

ಇದನ್ನೂ ಓದಿ: ಕಡಬ: ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬೈಕ್‌

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರೈ ತೆಂಕಕಾರಂದೂರು, ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಅಂಗಡಿಬೆಟ್ಟು, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಕುಕ್ಕೆಟ್ಟು,

ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ, ಗೌರವ ಸಲಹೆಗಾರರಾದ ಶ್ರೀ ವಿಷ್ಣು ಸಂಪಿಗೆತ್ತಾಯ, ಜಗದೀಶ್ ಗೌಡ ಕಜೆಬೆಟ್ಟು, ದೇವಾಲಯದ ಅರ್ಚಕರಾದ ಶಂಕರ ನಾರಾಯಣ ಉಪಾಧ್ಯಾಯ,

ಉಪಾಧ್ಯಕ್ಷ ಶರತ್ ಕಾಡಬಾಗಿಲು, ಭಜನಾ ಮಂಡಳಿ ಕಾರ್ಯದರ್ಶಿ ನಿತಿನ್ ಶೆಟ್ಟಿ ಪಳಿಕೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಜಯಂತ್ ಕುಲಾಲ್ ಓಡದಕರಿಯ, ಯೋಗೀಶ್ ಗೌಡ ಗಿಳಿಕಾಪು, ಪ್ರಕಾಶ್ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *