ಬೆಳ್ತಂಗಡಿ:(ಜ.17) ಬೆಳ್ತಂಗಡಿ ತಾಲೂಕಿನ ಪ್ರಶಸ್ತಿ ವಿಜೇತ ಕಲಾ ತಂಡವಾಗಿರುವ ಮಂದಾರ ಕಲಾ ತಂಡ ಉಜಿರೆ ಇವರ ವತಿಯಿಂದ 19 ರ ವಯೋಮಾನದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ
ಇದನ್ನೂ ಓದಿ: ಉಪ್ಪಿನಂಗಡಿ: ಆಟೋರಿಕ್ಷಾದಲ್ಲಿ ಗಾಂಜಾ ಸಾಗಾಟ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಬಾಲಕಿಯರನ್ನು ಒಳಗೊಂಡ ವಾಲಿಬಾಲ್ ತಂಡ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದಿರುತ್ತದೆ.
ಈ ವಿದ್ಯಾರ್ಥಿಗಳಿಗೆ ಮಂದಾರ ಕಲಾ ತಂಡ ಉಜಿರೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಕಲಾವಿದ ಶ್ರೀಯುತ ಜಯರಾಮ್ ಕೆ ನಾಯರ್ ಮುಂಡಾಜೆ ಹಾಗೂ ತಂಡದ ಸಂಚಾಲಕರು ಶ್ರೀಯುತ ಪ್ರವೀಣ್ ಉಜಿರೆ ಹಾಗೂ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮಂದಾರ ತಂಡದ ಸಾರಥಿ ಹಾಗೂ ರಾಷ್ಟ್ರ ಮಟ್ಟದ ಸಾಧಕರ ತರಬೇತುದಾರರಾಗಿರುವ ಶ್ರೀಯುತ ಗುಣಪಾಲ್ ಎಂ. ಎಸ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳ ತರಬೇತುದಾರರಾಗಿರುವ ಶ್ರೀಯುತ ಸಂದೀಪ್ ಶೆಟ್ಟಿ, ಕುಮಾರಿ ಸಹನಾ, ವರ್ಷ, ಅನ್ವಿತಾ ಹಾಗೂ ಅಂಜಲಿ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮ ನಿರೂಪಣೆಯನ್ನು ಮಂದಾರ ತಂಡದ ಕಲಾವಿದರು ಆಗಿರುವ ಶ್ರೀಯುತ ವಿನೋದ್ ಚಾರ್ಮಾಡಿ, ಅನಿಸಿಕೆಯನ್ನು ಶ್ರೀಯುತ ಪ್ರಸಾದ್ ಶಿರ್ಲಾಲು ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀಯುತ ಶಶಿಧರ್ ದೇವಾಡಿಗ ನೆಲ್ಲಿಕಾರು ವಾಚಿಸಿದರು.