ಬೆಳ್ತಂಗಡಿ:(ಜ.17) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ 4 ಕೋಟಿ 60 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣ ಮತ್ತು ಸಿಬ್ಬಂದಿ ವಸತಿಗೃಹ ಕಾಮಗಾರಿಗೆ ಹಾಗೂ
ಇದನ್ನೂ ಓದಿ: ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ನಲ್ಲಿ “ಮಕ್ಕಳ ಗ್ರಾಮ ಸಭೆ”
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 40 ಲಕ್ಷ ವೆಚ್ಚದಲ್ಲಿ ನಡೆಯುವ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಯ ಶಿಲಾನ್ಯಾಸವನ್ನು ಮಾಡಲಿದ್ದಾರೆ.
ನಂತರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿನ ಸಾರ್ವಜನಿಕ ಪ್ರಯೋಗಾಲಯ ಕಟ್ಟಡದ ಉದ್ಘಾಟನೆ, ತಾಲೂಕು ಆಸ್ಪತ್ರೆಯಲ್ಲಿನ 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ
ಲೋಕಾರ್ಪಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಜ. 18 ರಂದು ನೆರವೇರಿಸಲಿದ್ದಾರೆ.