Fri. Jan 17th, 2025

Madanthyar: ಜೆಸಿಐ ಮಡಂತ್ಯಾರು ವಿಜಯ 2024ರ ಶಾಶ್ವತ ಯೋಜನೆಗಳ ಅನಾವರಣ

ಮಡಂತ್ಯಾರು:(ಜ.17) ಜೆಸಿಐ ಮಡಂತ್ಯಾರಿನ 2024 ರ ಶಾಶ್ವತ ಯೋಜನೆಗಳಾದ ಶಿಶು ವಿಹಾರದ ಇಂಟರ್ಲಾಕ್ ಅಳವಡಿಕೆ ಮತ್ತು ಜೆಸಿ ವೃತ್ತದ ನವೀಕರಣದ ಅನಾವರಣ ಕಾರ್ಯಕ್ರಮವು ಜ.14 ರಂದು ನೆರವೇರಿತು.

ಇದನ್ನೂ ಓದಿ: ಬೆಳ್ತಂಗಡಿ: ರಾಷ್ಟ್ರ ಮಟ್ಟದ ಬೆಳ್ಳಿ ಪದಕ ಕ್ರೀಡಾ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಮುಖ್ಯ ಆತಿಥಿಗಳಾಗಿ ಪೂರ್ವಾಧ್ಯಕ್ಷರಾದ ಜೆಸಿ ಪ್ರವೀಣ್ ಕುಮಾರ್ ದೋಟ, ನಿಕಟ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿಐ ಪಿಪಿಪಿ ಕಾರ್ತಿಕೇಯ ಮಧ್ಯಸ್ಥ, ಗೌರವ ಅತಿಥಿಗಳಾಗಿ ವಲಯಾಧ್ಯಕ್ಷರು ಜೆಸಿಐ ಸೆನೆಟರ್ ಅಭಿಲಾಷ್ ಬಿ ಎ,

ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ರಂಜಿತ್ H , ಶಿಶುವಿಹಾರ ಮಹಿಳಾಮಂಡಲ ಮಡಂತ್ಯಾರು ಇದರ ಅಧ್ಯಕ್ಷರಾದ ಶ್ರೀಮತಿ ಲೂಸಿ ಕಾರ್ಲೊ ಇವರಿಂದ ನಡೆಯಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೇಸಿ ವಿಕೇಶ್ ಮಾನ್ಯ, ವಲಯ ನಿರ್ದೇಶಕರಾದ ಜೇಸಿ ಅಶೋಕ್ ಗುಂಡಿಯಲ್ಕೆ, ನಿಯೋಜಿತ ಅಧ್ಯಕ್ಷರಾದ ಜೇಸಿ ಅಮಿತಾ ಅಶೋಕ್, ಕಾರ್ಯದರ್ಶಿ ಜೇಸಿ ಸಂಯುಕ್ತ್ ಪೂಜಾರಿ,

ನಿಯೋಜಿತ ಕಾರ್ಯದರ್ಶಿ ಜೇಸಿ ಆದರ್ಶ್ ಹಟ್ಟತ್ತೋಡಿ, ಮಹಿಳಾಮಂಡಲದ ಸದಸ್ಯರಾದ ಶ್ರೀಮತಿ ರೋಹಿಣಿ ಪಕಳ, ಶ್ರೀಮತಿ ಸವಿತ, ಶ್ರೀಮತಿ ಚಂದ್ರಕಲಾ, ಜೇಸಿ ಘಟಕದ ಸದಸ್ಯರಾದ ಜೇಸಿ ಯತೀಶ್ ರೈ,

ಜೇಸಿ ಮನೋಜ್ ಮೈಲೋಡಿ, ಜೇಸಿ ಸಾಯಿಸುಮ ಎಂ.ನಾವಡ, ಜೇಸಿ ತೃಪ್ತಿ ವಿಕೇಶ್, ಬೆಳ್ತಂಗಡಿ ಮಂಜುಶ್ರೀ ಇದರ ನಿಕಟ ಪೂರ್ವ ಮಹಿಳಾ ಸಂಯೋಜಕಿ ಜೇಸಿ ಶ್ರುತಿ ರಂಜಿತ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *