ಮಂಗಳೂರು:(ಜ.17) ಹಾಡಹಗಲೇ ಬ್ಯಾಂಕ್ ದರೋಡೆ ನಡೆದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಬ್ಯಾಂಕ್ ಸಿಬ್ಬಂದಿಗಳಿಗೆ ಬಂದೂಕು ತೋರಿಸಿ ಬೆದರಿಸಿ, ಹಣ, ಚಿನ್ನಾಭರಣ ದೋಚಲಾಗಿದೆ ಎಂದು ವರದಿಯಾಗಿದೆ.
ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ಗೆ ಐದು ಮಂದಿ ದುಷ್ಕರ್ಮಿಗಳು ನುಗ್ಗಿ, ಬಂದೂಕು ತೋರಿಸಿ, ಹಣ, ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.