Sat. Jan 18th, 2025

ಉಜಿರೆ: (ಜ.17) ಯಕ್ಷಭಾರತಿ(ರಿ. )ಕನ್ಯಾಡಿ ಬೆಳ್ತಂಗಡಿ ಇದರ ದಶಮಾನೋತ್ಸವದ ಪ್ರಯುಕ್ತ ಶ್ರೀಮಾತಾ ಆರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ನಾಗರಾಜ ಕಾಂಪೌಂಡ್ ಆವರಣದಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು.

ಇದನ್ನೂ ಓದಿ: ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಕರಸಂಕ್ರಾಂತಿ ಆಚರಣೆ

ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ ವಹಿಸಿದ್ದರು.ಅತಿಥಿಗಳಾಗಿ ಪದ್ಮಶೇಖರ ಜೈನ್ ಕಾವಳಕಟ್ಟೆ,ಭಾಗವತ ಪಟ್ಲ ಸತೀಶ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಉಜಿರೆ ಲಕ್ಷ್ಮಿ ಗ್ರೂಪ್ಸ್ ನ ಮೋಹನ ಕುಮಾರ್,ಉಜಿರೆ ಶ್ರೀ ದುರ್ಗಾ ಇಂಡಸ್ಟ್ರೀಸ್ ರಮೇಶ್ ಶೆಟ್ಟಿ ಭಾಗವಹಿಸಿದ್ದರು.

ಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಷ್ಪಾವತಿ ಆರ್ ಶೆಟ್ಟಿ ಇವರನ್ನುಸನ್ಮಾನಿಸಲಾಯಿತು. ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಶುಭಹಾರೈಸಿದರು.

ಜಯಶಂಕರ ದಾಸ್ ಕಾವಳಕಟ್ಟೆ, ಶ್ರೀಮಾತಾ ಅರ್ಟ್ಸ್ ಗುರುಪ್ರಸಾದ್, ಚೇತನಾ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಯಕ್ಷ ಭಾರತಿ ಟ್ರಸ್ಟಿಗಳಾದ ಮುರಳಿಧರ ದಾಸ್, ಮಹೇಶ ಕನ್ಯಾಡಿ,ಶಿತಿಕಂಠ ಭಟ್ ಉಜಿರೆ, ಕುಸುಮಾಕರ ಕುತ್ತೋಡಿ, ಹರೀಶ ಕೊಳ್ತಿಗೆ, ವಿದ್ಯಾ ಕುಮಾರ್ ಕಾಂಚೋಡು,ಕೌಶಿಕ್ ರಾವ್ ಕನ್ಯಾಡಿ ಮತ್ತು ಕೌಸ್ತುಭ ಉಪಸ್ಥಿತರಿದ್ದರು .

ಯಕ್ಷ ಭಾರತಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಕೃಷ್ಣಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *