ಚೆನ್ನೈ:(ಜ.18) ತಮ್ಮ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಮತ್ತು ಅಶ್ಲೀಲ ಫೋಟೋಗಳು, ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಚೆನ್ನೈನಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಅವರಿಬ್ಬರೂ ಹಣ ಸಂಪಾದಿಸಲು ಆ ಫೋಟೋ, ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮೈಸೂರು: ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ!!
ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ದೂರು ದಾಖಲಿಸಿದ ನಂತರ, ಪೊಲೀಸ್ ತಂಡವು ಆ ದಂಪತಿಯನ್ನು ಪತ್ತೆಹಚ್ಚಿತು. ಪೊಲೀಸರು ಆರೋಪಿಗಳಲ್ಲಿ ಒಬ್ಬರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡರು. ಅದರಲ್ಲಿ ಅಪ್ರಾಪ್ತ ಹುಡುಗಿಯರ ಹಲವಾರು ಅಶ್ಲೀಲ ವೀಡಿಯೊ ತುಣುಕುಗಳು ಕಂಡುಬಂದಿವೆ.
ಹೆಚ್ಚಿನ ವೀಡಿಯೊಗಳನ್ನು ಹುಡುಗಿಯರ ಒಪ್ಪಿಗೆಯಿಲ್ಲದೆ ಗುಪ್ತ ಕ್ಯಾಮೆರಾದಂತೆ ಕಾಣುವ ಕ್ಯಾಮೆರಾದ ಮೂಲಕ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಸ್ವಂತ ಮಗಳನ್ನು ಕೂಡ ವೇಶ್ಯಾವಾಟಿಕೆಗೆ ದೂಡಿದ್ದಾರೆ ಮತ್ತು ಅವಳ ವಿಡಿಯೋವನ್ನು ಕೂಡ ಇತರ ಹುಡುಗಿಯರೊಂದಿಗೆ ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ತಂಡ ದಂಪತಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಪ್ರಾಪ್ತ ಬಾಲಕಿಯನ್ನು ಸರ್ಕಾರಿ ಆರೈಕೆ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆ ಅನುಭವಿಸಿದ ಆಘಾತಕ್ಕೆ ಕೌನ್ಸೆಲಿಂಗ್ ಜೊತೆಗೆ ಇತರ ಅಗತ್ಯ ಬೆಂಬಲವನ್ನು ನೀಡಲಾಗಿದೆ. ಆರೋಪಿ ದಂಪತಿಗಳ ಮೊಬೈಲ್ ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.