Sat. Jan 18th, 2025

Kadaba: ಟೈಲರ್ ಬಳಿ ಹೋಗಿ ಬರುವುದಾಗಿ ಹೇಳಿ ಹೋದ 24 ವರ್ಷದ ಯುವತಿ ನಾಪತ್ತೆ!

ಕಡಬ:(ಜ.18) ಟೈಲರ್ ಬಳಿ ಹೋಗಿ ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಹೋದ ಯುವತಿಯೋರ್ವರು ತನ್ನ ಸ್ಕೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ನಾಪತ್ತೆಯಾಗಿರುವ ಕುರಿತು ಆಕೆಯ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಟೋಲ್ ಸಿಬ್ಬಂದಿಯಿಂದ ಲಾರಿ ಚಾಲಕನ ಮೇಲೆ ಹಲ್ಲೆ

ಚಾರ್ವಾಕ ಗ್ರಾಮದ ಅಂಬುಲ ನಿವಾಸಿ ದೀಕ್ಷಾ (24ವ) ನಾಪತ್ತೆಯಾದವರು.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ದೀಕ್ಷಾ ರಜೆ ಮಾಡಿ ಜಿ.1 ರಂದು ಊರಿಗೆ ಬಂದು ಮನೆಯಲ್ಲೇ ಉಳಿದುಕೊಂಡಿದ್ದರು, ಜ.14 ರಂದು ಸಂಜೆ ಬಟ್ಟೆ ಹೊಲಿಸಲು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೋದಾಕೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ.

ಮನೆ ಮಂದಿ ಹುಡುಕಾಡಿದ ಸಂದರ್ಭದಲ್ಲಿ ಸುಮಾರು 1 ಕಿ.ಮೀ ದೂರದ ರಸ್ತೆಯೊಂದರಲ್ಲಿ ಆಕೆಯ ಸ್ಕೂಟಿ ಪತ್ತೆಯಾಗಿದೆ.
ದೀಕ್ಷಾ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು.

ಪರಿಚಯಸ್ಥರಲ್ಲಿ ವಿಚಾರಿಸಿದಾಗ ದೊರೆತ ಮಾಹಿತಿಯನ್ವಯ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ಮತ್ತು ಗೆಳೆಯರ ಬಗ್ಗೆ ಸಂಶಯ ವ್ಯಕ್ತಪಡಿಸಿ ಯುವತಿಯ ತಂದೆ ಚಂದ್ರಶೇಖರ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *