Sat. Jan 18th, 2025

Mysore: ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ!!

ಮೈಸೂರು, (ಜ.18): ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ.

ಇದನ್ನೂ ಓದಿ: ಮಂಗಳೂರು: ಕೋಟೆಕರ್ ಉಲ್ಲಾಳ ಬ್ಯಾಂಕ್ ದರೋಡೆ: ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ

ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್​ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್​ ಪ್ರಾಣ ಕಳೆದುಕೊಂಡಿದ್ದಾನೆ.

ಯುವತಿ ಪೋಷಕರು ಈತನ ಪ್ರೀತಿಗೆ ಅಡ್ಡಿಯಾದರೂ. ಅಷ್ಟೇ ಅಲ್ಲ ಯುವತಿಯನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು. ಯುವತಿ ಬೇರೆ‌ ಹುಡುಗನ ಜೊತೆ ಮದುವೆಯಾದ ಮೇಲೆ‌ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದರು. ಆದ್ರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು.

ಮದುವೆ ನಂತರವೂ ಆಕೆ ವಿನಯ್ ಜೊತೆ ಸುತ್ತಾಟ ಮುಂದುವರಿಸಿದ್ದಳು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು.‌ ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಜನವರಿ 16 ರಂದು ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಇದು ವಿನಯ್‌ಗೆ ಅವಮಾನವಾಗಿತ್ತು.‌ ಕೊನೆಗೆ ಆಕೆ ಸಹ ನಾನು ನನ್ನ ಪತಿ ಜೊತೆ ಹೋಗುವುದಾಗಿ ಹೇಳಿದ್ದಳು. ಇದು ಸಹಜವಾಗಿ‌ ವಿನಯ್ ಅಸಮಾಧಾನಕ್ಕೆ ಕಾರಣವಾಗಿತ್ತು.

ನಂತರವೂ ಆಕೆಯನ್ನು ಸಂಪರ್ಕಿಸಲು ವಿನಯ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ವಿನಯ್, ಮೇಗಳಾಪುರದ ತನ್ನ ಸಹೋದರಿಯ ಮನೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ‌. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡಿದ್ದಾನೆ. ಇನ್ನು ಈ ಸಾವಿಗೆ ಯುವತಿಯ‌ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ.

ಆಕೆ ಆತನ ಜೊತೆ ಚೆನ್ನಾಗಿಯೇ ಇದ್ದಳು. ಮದುವೆ ಆದ ಮೇಲೂ ಸಹ ಚೆನ್ನಾಗಿದ್ದಳು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *