Mon. Apr 28th, 2025

Ujire: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

ಉಜಿರೆ:(ಜ.18) “ಬಳಸಿದಷ್ಟು ಮುಗಿಯದ ಅಕ್ಷಯಪಾತ್ರೆ ಶಿಕ್ಷಣ, ಅದರ ಸದುಪಯೋಗವನ್ನು ಪಡೆದು ಮುನ್ನುಗ್ಗಿರಿ” ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ನೂತನ ಶೈಕ್ಷಣಿಕ ಸಂಯೋಜಕರಾದ ಡಾ.ಎಸ್.ಎನ್ ಕಾಕತ್ಕರ್ ಇವರು ಹಾರೈಸಿದರು.

ಇದನ್ನೂ ಓದಿ: ಚೆನ್ನೈ: ಹಣಕ್ಕಾಗಿ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ತಂದೆ -ತಾಯಿ!!

“ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ನೆನಪು ಶಾಶ್ವತ, ಶಿಕ್ಷಕರ ಕಾಳಜಿಯ ಒಳ ಅರ್ಥವನ್ನು ತಿಳಿದು ಮುಂದೆ ಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಿರಿ” ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಧನ್ಯಕುಮಾರ್ ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಶುಭಮಸ್ತು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಒಂಬತ್ತನೆ ತರಗತಿ ವಿದ್ಯಾರ್ಥಿಗಳು ಸಮೂಹ ಗಾಯನ, ಸಮೂಹ ನೃತ್ಯ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರು ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ವಿದ್ಯಾರ್ಥಿ ಅಲ್ರಿಕ್ ಹಾಗೂ ವಿದ್ಯಾರ್ಥಿನಿ ಮಾನ್ಯ ಪೈ ಕಾರ್ಯಕ್ರಮ ನಿರೂಪಿಸಿ, ಶಾಲಾ ಪ್ರಾಂಶುಪಾಲರು ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಕಲ್ಯಾಣಿ ರಾವ್ ವಂದಿಸಿದರು.

Leave a Reply

Your email address will not be published. Required fields are marked *