Sun. Jan 19th, 2025

Udupi: ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! – ಏನದು?!

ಉಡುಪಿ:(ಜ.19) ಅಪ್ಪ ಮಗ ಸೇರಿ ತಮ್ಮ ಸ್ವಂತ ಬಸ್ ಮಾರಿ, ಮತ್ತೆ ಮಾರಿದ್ದ ಆ ಬಸ್‌ ಅನ್ನು ಪುನಃ ಕದ್ದು ಮನೆಗೆ ತಂದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ನಡೆದಿತ್ತು. ಅದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರು : ವಿಧಾನಸೌಧದಲ್ಲಿ ದತ್ತಪೀಠಕ್ಕೆ ಸಂಬಂಧಪಟ್ಟಂತೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ದಾಖಲೆ ನೀಡಿದ ರಘು ಸಕಲೇಶಪುರ

ತುಮಕೂರಿನ ಕೊರಟಗೆರಿಯ ಸೈಯದ್ ಎನ್ನುವವರು ಬಸ್ ಕಾಪುವಿನ ಸಮೀರ್ ಮಾಲೀಕತ್ವದ 2017ರ ಮಾಡೆಲ್ ನ ಬಸ್ ಅನ್ನು ಖರೀಸಿದಿದ್ದರು. ಸೈಯದ್ ಮಗ ಸಿದ್ದಿಕ್ ಹಾಗೂ ಸ್ನೇಹಿತ ಜಾವೇದ ಜೊತೆ ಬಸ್ ಖರೀದಿಗೆ ಹೋಗಿದ್ದರು. 9,50,000 ನೀಡಿ ಬಸ್ ಖರೀದಿಸಿ ತುಮಕೂರಿಗೆ ತಂದಿದ್ದರು. ಬಸ್ ಮಾರಾಟವಾದ ಬಳಿಕ ಅಪ್ಪ ಮಗನೇ, ಮಾರಾಟ ಮಾಡಿದ ಬಸ್ಸನ್ನು ಮತ್ತೆ ಕದ್ದು ತಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮೀರ್ ಹಾಗೂ ಮಗ ಅಬ್ದುಲ್ ಖಾದರ್ ವಿರುದ್ಧ ‘FIR’ ದಾಖಲಾಗಿದೆ. ಸದ್ಯ ತಂದೆ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಬಸ್‌ ಖರೀದಿಗೆ ನೀಡಬೇಕಾದ ಹಣವನ್ನು ನೀಡದ ಕಾರಣ ಬಸ್‌ಅನ್ನು ವಾಪಾಸ್‌ ಪಡೆದಿದ್ದಾಗಿ ಅಪ್ಪ-ಮಗ ಹೇಳಿದ್ದಾರೆ. ಯಸ್, ತನ್ನ ವಿರುದ್ಧ ದಾಖಲಾಗಿರುವ ದೂರು ಸುಳ್ಳು ಎಂದು ಸಮೀರ್‌ ಹಾಗೂ ಆತನ ತಂದೆ ಅಬ್ದುಲ್‌ ಖಾದರ್‌ ಹೇಳಿದ್ದಾರೆ. ವಿದೇಶದಲ್ಲಿರುವ ಆರೋಪಿ ಸಮೀರ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ‘ನಾನು ಯಾವುದೇ ಬಸ್ಸನ್ನು ಕದ್ದಿಲ್ಲ ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ನನಗೆ ಬಸ್‌ನ ಮಾರಾಟದ ಮೊತ್ತ ಈವರಗೆ ಸಿಕ್ಕಿಲ್ಲ ಎಂದು ಶಾಝಿನ್ ಬಸ್ಸಿನ ಮಾಲೀಕ ಸಮೀರ್ ಹೇಳಿದ್ದಾರೆ.

ಸಮೀರ್ ಹೇಳಿದ್ದೇನು?

ನಮ್ಮ ಬಸ್‌ ಅನ್ನು ತುಮಕೂರಿನ ಮೊಹಮದ್ ಗೌಸ್ ಎನ್ನುವವರಿಗೆ ಮಾರಾಟ ಮಾಡಿದ್ದೆ. ಮಾರಾಟದ ಹಣ 9.50 ಲಕ್ಷ ರೂಪಾಯಿ ಆಗಿತ್ತು. ಮೊಹಮದ್‌ ಗೌಸ್‌ ಚೆಕ್ ಮೂಲಕ 9.50 ಲಕ್ಷ ರೂಪಾಯಿ ಹಣ ಪಾವತಿ ಮಾಡಿದ್ದರು. ಆದರೆ, ಅವರು ಕೊಟ್ಟ ಚೆಕ್‌ ಬೌನ್ಸ್‌ ಆಗಿತ್ತು. ಆ ಬಳಿಕ ಫೋನ್‌ಪೇ ಮೂಲಕ 2.26 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿ ಹಣವನ್ನು ಕ್ಯಾಶ್‌ ರೂಪದಲ್ಲಿ ಕೊಟ್ಟಿದ್ದಾರೆ. ಆ ಬಳಿಕ ಯಾವುದೇ ಹಣಕಾಸಿನ ವ್ಯವಹಾರ ನಮ್ಮ ನಡುವೆ ನಡೆದಿಲ್ಲ. ಆರು ತಿಂಗಳಾದರೂ ಬಸ್‌ ಮಾರಾಟದ ಹಣ ಬಂದಿಲ್ಲ. ಹಣ ಕೇಳಿದಾಗ ನಾಳೆ ಕೊಡುತ್ತೇವೆ ನಾಡಿದ್ದು ಕೊಡುತ್ತೇವೆ ಅಂತಾ ಹೇಳುತ್ತಿದ್ದರು ಎಂದು ಸಮೀರ್‌ ಹೇಳಿದ್ದಾರೆ.

ಅಲ್ಲದೆ ಆರು ತಿಂಗಳು ಕಾಲ ತುಮಕೂರಿನಲ್ಲಿ ಬಸ್ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನಾವು ತುಮಕೂರಿನವರು, ನಮ್ಮ ಬಗ್ಗೆ ನಿಮಗೆ ಗೊತ್ತಿದೆ ಅಲ್ವಾ. ಈಗಾಗಲೇ ನಿಮ್ಮೂರಿನ ಮೂರು ಮಂದಿಯನ್ನು ಸುಟ್ಟಿದ್ದೇವೆ ಎಂದೂ ಬೆದರಿಕೆಯನ್ನೂ ಹಾಕಿದ್ದಾರೆ. ಹೀಗಾಗಿ ಬೇರೆ ಉಪಾಯ ಇಲ್ಲದೆ ನಾವು ಬಸ್‌ಅನ್ನು ವಾಪಾಸ್‌ ತಂದಿದ್ದೇವೆ. ನಾವು ಕೊಟ್ಟಿದ್ದ ಬಸ್ಸನ್ನು ಮರಳಿ ವಾಪಾಸ್ ತೆಗೆದುಕೊಂಡು ಬಂದಿದ್ದೇವೆ. ಮೊಹಮ್ಮದ್ ಗೌಸ್ ರವರ ಮಗ ಮೊಹಮ್ಮದ್ ಇರ್ಫಾನ್ ರವರು ಸೋಶಿಯಲ್ ಮೀಡಿಯಾ ಮುಖಾಂತರ ನನ್ನ ಹೆಸರನ್ನು ಹಾಳು ಮಾಡಿದ್ದಾರೆ. ಮೊಹಮ್ಮದ್ ಗೌಸ್ ಬಳಿ ಯಾವುದೇ ದಾಖಲೆಗಳಿಲ್ಲ. ಅದರೂ ಕಾಪು ಪೊಲೀಸ್ ಠಾಣೆ ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *