ರಾಜಸ್ಥಾನ:(ಜ.19) ಶಾಲೆಯೆಂಬ ವಿದ್ಯಾ ದೇಗುಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ಜ್ಞಾನದ ಧಾರೆಯೆರೆದು ಸರಿ ದಾರಿಯಲ್ಲಿ ನಡೆಯುವಂತೆ ಮಾಡುತ್ತಾರೆ. ಆದ್ರೆ ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕರೇ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ.
ಹೆಡ್ ಮಾಸ್ಟರ್ ಒಬ್ರು ಶಾಲೆಯಲ್ಲಿಯೇ ಲೇಡಿ ಟೀಚರ್ ಜೊತೆ ಕಿಸ್ಸಿಂಗ್, ರೊಮ್ಯಾನ್ಸ್ ಅಂತ ಚಕ್ಕಂದ ಆಡಿದ್ದು, ಇವರಿಬ್ಬರ ಸರಸ ಸಲ್ಲಾಪದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕರ್ತವ್ಯವನ್ನು ಮರೆತು ವಿದ್ಯಾ ದೇಗುಲದಲ್ಲಿಯೇ ಇಂತಹ ಹೇಯ ಕೃತ್ಯ ಎಸಗಿದ ಶಿಕ್ಷಕರಿಬ್ಬರ ನಡೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್ ಮಾಡಿದ್ದಾರೆ.
ಪ್ರಿನ್ಸಿಪಾಲ್ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.