Wed. Jan 22nd, 2025

Belthangady: ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ(ರಿ.) ಮುಂಬೈ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕದಿಂದ ಭಜಕ ಶ್ರೀ ಹರಿಪ್ರಿಯ ವಿ.ಹರೀಶ್ ನೆರಿಯ ರವರಿಗೆ ಗುರುವಂದನೆ

ಬೆಳ್ತಂಗಡಿ:(ಜ.21) ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ (ರಿ.) ಮುಂಬೈ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕ ದ ಆಶ್ರಯ ದಲ್ಲಿ ಮುಂಬೈ ಯಲ್ಲಿ ನಡೆದ ಭಜನೋತ್ಸವದಲ್ಲಿ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ ಯ ಕುಣಿತ ಭಜನಾ

ಇದನ್ನೂ ಓದಿ: ಬಳಂಜ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಮುದರಂಗಡಿಯಲ್ಲಿ ಸನ್ಮಾನ

ತರಬೇತಿದಾರರಾಗಿ ಆಯ್ಕೆಗೊಂಡು ಮುಂಬೈ ಮಹಾನಗರದ 120 ಭಜನಾ ಮಂಡಳಿಗಳಿಂದ ಆಯ್ದ 140 ಕ್ಕೂ ಅಧಿಕ ಮಕ್ಕಳಿಗೆ ಕುಣಿತ ತರಬೇತಿಯನ್ನು ನೀಡಿ ಭಜನೋತ್ಸವದಲ್ಲಿ ಉತ್ತಮ ರೀತಿಯಲ್ಲಿ ಕುಣಿತ ಭಜನೆಯನ್ನು ಪ್ರಸ್ತುತ ಪಡಿಸಿದ

ಕುಣಿತ ಭಜನಾ ತರಬೇತಿದಾರರಾದ ಭಜಕ ಶ್ರೀ ಹರಿಪ್ರಿಯ, ವಿ ಹರೀಶ್ ನೆರಿಯ ರವರಿಗೆ ಭಜನೋತ್ಸವದ ವೇದಿಕೆಯಲ್ಲಿ ಮುಂಬೈ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆಯಿಂದ ಗುರುವಂದನೆ ಅರ್ಪಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಂಬೈಯ ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆಯ ಅಧ್ಯಕ್ಷರಾದ ದೇವು ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು, ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *