Wed. Jan 22nd, 2025

Bandaru: ಕೊಂಕನೊಟ್ಟು ತರವಾಡು ಮನೆಯಲ್ಲಿ ನಡೆದ ದೈವಗಳ ನೇಮೋತ್ಸವ – ಗಂಧ-ಪ್ರಸಾದ ಸ್ವೀಕರಿಸಿ ಪುನೀತರಾದ ಊರ-ಪರವೂರ ಭಕ್ತರು

ಬಂದಾರು :(ಜ.22) ದಕ್ಷಿಣ ಕನ್ನಡ ಜಿಲ್ಲೆಯ ಬಂದಾರು ಗ್ರಾಮ ಪೆರ್ಲ -ಬೈಪಾಡಿ ಕೊಂಕನೊಟ್ಟು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವವು ಜನವರಿ 17,18 ರಂದು ನೆರವೇರಿತು.

ಇದನ್ನೂ ಓದಿ: ಬೆಳ್ತಂಗಡಿ : ಕ್ರೀಡಾ ಬ್ಯಾನರ್ ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

ಈ ಪ್ರಯುಕ್ತ ಬೆಳಗ್ಗೆ ಗಣಹೋಮ, ಶುದ್ಧಿಕಲಶ, ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಭಂಡಾರ ತೆಗೆಯುವುದು, ಸ್ಥಳ ಸಾನಿಧ್ಯ ದೈವಗಳಾದ ಕಲ್ಲುರ್ಟಿ, ಪಂಜುರ್ಲಿ -ಕಲ್ಲುರ್ಟಿ, ದೈವಗಳ ನೇಮೋತ್ಸವ ನಡೆಯಿತು.

ಇದನ್ನೂ ಓದಿ: ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ

ಬಳಿಕ 18 ಶನಿವಾರದಂದು ರಂದು ಸಂಜೆ ಭಂಡಾರ ತೆಗೆಯುವುದು, ಕೊಂಕನೊಟ್ಟು ಕುಟುಂಬದ ದೈವಗಳಾದ ಸತ್ಯದೇವತೆ, ವರ್ಣರ ಪಂಜುರ್ಲಿ, ರುದ್ರಾಂಡಿ, ಪುರುಷ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯುವ ಮೂಲಕ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *