Wed. Jan 22nd, 2025

Belthangady: ಅನ್ವೇಷಣಾ ಕಾಂಟ್ರಾಕ್ಟಿಂಗ್ ಆ್ಯಂಡ್ ಸರ್ವೀಸ್ ಸೆಂಟರ್ ಶುಭಾರಂಭ!

ಬೆಳ್ತಂಗಡಿ (ಜ.22) : ಜನರ ಅಗತ್ಯತೆಯನ್ನು ಗಮನಿಸಿಕೊಂಡು ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಚರ್ಚ್ ರೋಡ್‌ ಬಳಿ ಅನ್ವೇಷಣಾ ಕಾಂಟ್ರಾಕ್ಟಿಂಗ್ ಆ್ಯಂಡ್ ಸರ್ವೀಸ್ ಜ.22 ರಂದು ಉದ್ಘಾಟನೆಗೊಂಡಿತು.

ಇದನ್ನೂ ಓದಿ: ಸುಳ್ಯ: ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿ ಎಸ್ಕೇಪ್‌ ಆದ ಚಾಲಕ

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು, ಲಕ್ಷ್ಮೀ ಇಂಡಸ್ಟ್ರೀಸ್ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್, ಖ್ಯಾತ ವಕೀಲರಾದ ಧನಂಜಯ್ ರಾವ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮೋಹನ್ ಕುಮಾರ್ ಅವರು ಸಂಸ್ಥೆಗೆ ಇಟ್ಟಿರುವ ಹೆಸರಿನಂತೆ ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಿ.

ಒಳ್ಳೆಯ ಉದ್ದೇಶದೊಂದಿಗೆ ಈ ಸಂಸ್ಥೆಯು ಆರಂಭಗೊಂಡಿದೆ. ಸಂಸ್ಥೆಯು ತಮ್ಮಲ್ಲಿ ಲಭ್ಯವಿರುವ ಜನರ ಅಗತ್ಯತೆಯನ್ನು ಪೂರೈಸಿ ಉತ್ತಮ ಹೆಸರು ಮಾಡಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ವಕೀಲರಾದ ಧನಂಜಯ್ ಕುಮಾರ್ ರವರು ಇಂತಹ ಸಂಸ್ಥೆಯ ಅಗತ್ಯತೆ ನಮ್ಮ ಬೆಳ್ತಂಗಡಿಗೆ ಖಂಡಿತಾ ಇದೆ. ಸರಿಯಾದ ಸಮಯಕ್ಕೆ ಉದ್ಯಮವನ್ನು ಪ್ರಾರಂಭಿಸಿದ್ದಾರೆ.

ಎಲ್ಲರ ಸಹಕಾರದಿಂದ ಈ ಉದ್ಯಮವು ಯಶಸ್ವಿಯಾಗಲಿ, ಸಂಸ್ಥೆಯು ಉತ್ತಮ ಹೆಸರು ಮಾಡಲಿ ಎಂದು ಶುಭ ನುಡಿಗಳನ್ನಾಡಿದರು.ಈ ಸಂದರ್ಭ ಸಂಸ್ಥೆಯ ಮಾಲಕರಾದ ಮುಖೇಶ್, ಯಶೋಧರ, ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಆರಂಭಗೊಂಡಿರುವ ಈ ಸಂಸ್ಥೆಯಲ್ಲಿ ವಾಟರ್ ಟ್ಯಾಂಕ್ ಕ್ಲೀನಿಂಗ್, ಇಂಟರ್ ಲಾಕ್ ಕ್ಲೀನಿಂಗ್, ಕಂಪೌಂಡ್ ವಾಷ್, ಜನರೇಟರ್ ರೆಂಟಲ್ ಸರ್ವಿಸ್, ವಾಟರ್ ಲೆವೆಲ್ ಕಂಟ್ರೋಲರ್ , ಕೋರ್ ಕಟ್ಟಿಂಗ್ ಮುಂತಾದ ಸೇವೆಗಳಲ್ಲಿ ಲಭ್ಯವಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್ – 9900884639, 9632661073,8792810885 ರನ್ನು ಸಂಪರ್ಕಿಸಿ.

ವಿನೂತನ ಸೇವೆಯ ಕಚೇರಿ ಅನ್ವೇಷಣಾ..!
ಬೆಳ್ತಂಗಡಿಯಲ್ಲೇ ಮೊಟ್ಟ ಮೊದಲ ಬಾರಿಗೆ ವಿನೂತನ ಮತ್ತು ವಿನೂತನ ಸೇವೆಯನ್ನು ಅನ್ವೇಷಣಾ ಜನರಿಗೆ ನೀಡುತ್ತಿದೆ. ವಾಟರ್ ಟ್ಯಾಂಕ್ ಕ್ಲೀನಿಂಗ್, ಇಂಟರ್ ಲಾಕ್ ಕ್ಲೀನಿಂಗ್, ಕಂಪೌಂಡ್ ವಾಷ್, ,ಜನರೇಟರ್ ರೆಂಟಲ್ ಸರ್ವಿಸ್, ವಾಟರ್ ಲೆವೆಲ್ ಕಂಟ್ರೋಲರ್ , ಮೊಬೈಲ್ ಸ್ವಾರ್ಟರ್ , ಕೋರ್ ಕಟ್ಟಿಂಗ್ ಇವುಗಳೆಲ್ಲವೂ ಬೆಳ್ತಂಗಡಿಯಲ್ಲೇ ಮೊಟ್ಟ ಮೊದಲು.

Leave a Reply

Your email address will not be published. Required fields are marked *