ಬೆಳ್ತಂಗಡಿ,ಜ.22( ಯು ಪ್ಲಸ್ ಟಿವಿ):ಇತ್ತೀಚೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಮುಕ್ತಾಯಗೊಂಡ 19 ರ ವಯೋಮಾನದ ಬಾಲಕಿಯರ ವಿಭಾಗದ ರಾಷ್ಟ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿನಿಧಿಸಿ ಅಮೋಘ ಸಾಧನೆ ಮಾಡಿ
ಬೆಳ್ಳಿಯ ಪದಕ ಪಡೆದ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವನ್ನು ಅದ್ದೂರಿಯಾಗಿ ತೆರೆದ ವಾಹನದ ಮೂಲಕ ಊರವರು ಸಂಘ ಸಂಸ್ಥೆಗಳು ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿದ್ದರು.
ಈ ಪಂದ್ಯಾಟದಲ್ಲಿ ಭಾಗವಹಿಸಿದ 6 ಮಕ್ಕಳಲ್ಲಿ 4 ಮಕ್ಕಳು ನಮ್ಮ ತಾಲೂಕಿನ ಕ್ರೀಡಾ ಕಾಶಿ ಎಂದು ಗುರುತಿಸಿದ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ಹಳೆ ವಿದ್ಯಾರ್ಥಿಗಳು.
ಇವರ ಅಭಿಮಾನದ ಮೇಲೆ ಊರಿನ ಜನರು ದೊಡ್ಡ ಪ್ರಚಾರ ಬ್ಯಾನರ್ ಹಾಕಿದ್ದರು. ಅದನ್ನು ಕ್ರೂರ ಮನಸ್ಸಿನ ವಿಕೃತ ಜನರು ಜ. 20 ಕ್ಕೆ ಹರಿದು ಹಾಕಿದ್ದಾರೆ. ಇದು ಕ್ರೀಡಾ ಕಾಶಿ ಬಂದಾರಿಗೆ ನಾಚಿಕೆ ವಿಷಯ ಆಗಿದೆ.
ಈ ವಿಕೃತ ಮನಸ್ಸಿನ ಕ್ರೂರ ಜನರಿಗೆ ಬಂದಾರಿನ ಜನರು ಆರಿಕೋಡಿಯ ತಾಯಿ ಚಾಮುಂಡೇಶ್ವರಿಯನ್ನು ಮತ್ತು ಕ್ಷೇತ್ರದ ಕಾರಣಿಕದ ದೈವ ಕೊರಗಜ್ಜನಿಗೆ ಪ್ರಾರ್ಥಿಸಿ ಅವರಿಗೆ ತಕ್ಕ ಶಿಕ್ಷೆ ಆಗಲು ಬೇಡಿಕೊಂಡಿದ್ದಾರೆ.