Mon. Apr 14th, 2025

Mangalore: ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ

ಮಂಗಳೂರು (ಜ.22): ಆಧುನಿಕ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯತಿಕಾರ್ಪ್ ಇಂಡಿಯಾ ಪ್ರೈ.ಲಿ. ಕಂಪನಿಯು ಕರ್ನಾಟಕದಾದ್ಯಂತ ಪದವೀಧರರಿಗೆ ಉದ್ಯೋಗ ಅವಕಾಶವನ್ನು ಘೋಷಿಸಿದೆ. ಕಂಪನಿಯು ತನ್ನ ಹೊಸ ಎಐ ಸಾಕ್ಷರತಾ ಅಭಿಯಾನವನ್ನು ಮುನ್ನಡೆಸಲು ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಿಗೂ ಪ್ರಾದೇಶಿಕ ಪ್ರತಿನಿಧಿಗಳನ್ನು ನೇಮಿಸುತ್ತಿದ್ದು, ಆಕರ್ಷಕ ವೇತನ ಪ್ಯಾಕೇಜ್‌ಗಳನ್ನು ನೀಡುತ್ತಿದೆ.

ಇದನ್ನೂ ಓದಿ: Chaitra Kundapura : ಫೈಯರ್ ಬ್ರಾಂಡ್ ಚೈತ್ರಾ ಕುಂದಾಪುರ ಹಾಗೂ ಕಿರಿಕ್‌ ಕೀರ್ತಿ ಮದುವೆ?!

ಹುದ್ದೆ ಹೆಸರು – ಎಐ ರೀಜನಲ್ ರೆಪ್ರೆಸೆಂಟೇಟಿವ್, ವೇತನ ಶ್ರೇಣಿಯು ತಿಂಗಳಿಗೆ ರೂ. 25,000 ದಿಂದ ರೂ.30,000ದವರೆಗೆ ಇರುತ್ತದೆ. ಸಂಸ್ಥೆಯು ಅಭಿವೃದ್ಧಿ ಪಡಿಸಿದ ಎಐ ಶಿಕ್ಷಕ್‌ನ ಮೂಲಕ ಎಐ ಕುರಿತು ಸಾಕ್ಷರತಾ ಅಭಿಯಾನ ನಡೆಸುವುದು ಕೆಲಸದ ಸ್ವರೂಪವಾಗಿರುತ್ತದೆ.

ಎಐ ಪ್ರಾದೇಶಿಕ ಪ್ರತಿನಿಧಿಯಾಗಿ ನೇಮಕಗೊಂಡ ಅಭ್ಯರ್ಥಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ಸ್ಥಾನವು ಹೊಸ ಪದವೀಧರರಿಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರವೇಶಿಸಲು ಹಾಗೂ ಶಿಕ್ಷಕ ಕ್ಷೇತ್ರದಲ್ಲಿ ಸಕಾರಾತ್ಮಕ ಕ್ರಾಂತಿಯನ್ನು ಮೂಡಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಪ್ರಾದೇಶಿಕ ಪ್ರತಿನಿಧಿ ಹುದ್ದೆಯ ಆದ್ಯತೆಗಳು

• ಎಐ ಕಾರ್ಡ್ಗಳನ್ನು ಪರಿಚಯಿಸುವ ಮೂಲಕ ಎಐ ಸಾಕ್ಷರತೆಯನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು.

ಹುದ್ದೆಗೆ ಬೇಕಾದ ಅರ್ಹತೆ

•⁠ ⁠ಪದವೀಧರನಾಗಿರಬೇಕು

•⁠ ⁠ಭಾಷಾ ನಿಪುಣತೆ (Kannada & English)

•⁠ ⁠ಉತ್ತಮ ಸಂವಹನ ಹಾಗೂ ಸಮುದಾಯದೊಂದಿಗೆ ತೊಡಗಿಕೊಳ್ಳುವ ಕೌಶಲ್ಯವಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌ಗಳನ್ನು [email protected]ಗೆ ಕಳುಹಿಸಬಹುದು. ಅಭಿಯಾನ ಮತ್ತು ಅರ್ಜಿ ಪ್ರಕ್ರಿಯೆ ಕುರಿತ ಹೆಚ್ಚಿನ ಮಾಹಿತಿಗಾಗಿ www.yaticorp.comಗೆ ಭೇಟಿ ನೀಡಿ. Contact number: 7349740777

Leave a Reply

Your email address will not be published. Required fields are marked *