ಪದ್ಮುಂಜ :(ಜ.22) ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಇತರ ಸಮಿತಿ ರಚನಾ ಸಭೆ ದೇವಸ್ಥಾನದ ಸಭಾ ವೇದಿಕೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜಿರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶಿವಶಂಕರ್ ನಾಯಕ್ ಮಾರುತಿಪುರ, ಆಡಳಿತ ಮಂಡಳಿ ಅಧ್ಯಕ್ಷರಾದ ಸದಾನಂದ ಮೇಲಾoಟ ಮೊಗೆರೋಡಿ, ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾದ ಹರ್ಷ ಮೇಲಾಂಟ, ಆಡಳಿತ ಮೊಕ್ತೇಸರರಾದ ಚಿದಾನಂದ ರಾವ್ ಕೊಲ್ಲಾಜೆ, ಪ್ರಧಾನ ಅರ್ಚಕರಾದ ವಿಜಯ ಭಟ್, ಸೇವಾ ಸಮಿತಿ ಅಧ್ಯಕ್ಷರಾದ ವಿಠ್ಠಲ್ ಶೆಟ್ಟಿ ಕೊಲ್ಲೊಟ್ಟು,
ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಸೀತಾರಾಮ್ ಮಡಿವಾಳ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಬ್ರಹ್ಮಕಲಸ ಮಾಜಿ ಅಧ್ಯಕ್ಷರಾದ ಲಕ್ಷ್ಮೀಶ ಮೇಲಾಂಟ, ಉದ್ಯಮಿ ಕಿರಣ್. ಡಿ.ಪುಷ್ಪಗಿರಿ, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಹಾಗೂ ತಿಮ್ಮಯ್ಯ ಗೌಡ, ಶಾರದಾ.ಆರ್.ರೈ, ದಿನೇಶ್ ಶೆಟ್ಟಿ ಮಲೆಂಗಲ್ಲು, ನಾರಾಯಣ ಗೌಡ ಮುಚ್ಚೂರು, ವಿವಿಧ ಸಂಘಟನೆಯ ಪ್ರಮುಖರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ನೂತನ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ ಕಾರ್ಯ ನೆರವೇರಿತು. ನಾರಾಯಣ ಗೌಡ ಮುಚ್ಚೂರು ಕಾರ್ಯಕ್ರಮ ನಿರ್ವಹಿಸಿದರು.