ಸುಳ್ಯ:(ಜ.22) ಕಡಬ ಮತ್ತು ಸುಳ್ಯದ ಪೆಟ್ರೋಲ್ ಬಂಕ್ಗಳಲ್ಲಿ ಹೊಸ ರೀತಿಯ ವಂಚನೆ ನಡೆದಿದೆ.
ಇದನ್ನೂ ಓದಿ: Bangalore : ಶಾಪಿಂಗ್ಗೆ ಕರೆದುಕೊಂಡು ಹೋಗಿಲ್ಲವೆಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆ
KA01MX9632 ನಂಬರಿನ ಥಾರ್ ಜೀಪ್ನ ಚಾಲಕನೊಬ್ಬ, ಕಡಬದ ಹಿಂದೂಸ್ಥಾನ್ ಪೆಟ್ರೋಲ್ ಬಂಕ್ಗೆ ಬಂದು ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಂತರ, ಪೆಟ್ರೋಲ್ ಬೇಕೆಂದು ಹೇಳಿ ಬಂಕ್ ಸಿಬ್ಬಂದಿಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾನೆ. ಈ ಅವಧಿಯಲ್ಲಿ ಅವನು ಡೀಸೆಲ್ ಹಣ ನೀಡದೆ ಜೀಪ್ನಲ್ಲಿ ಎಸ್ಕೇಪ್ ಆಗಿದ್ದಾನೆ.
ಇದೇ ರೀತಿಯ ಘಟನೆ ಡಿಸೆಂಬರ್ 25ರಂದು ಸುಳ್ಯದ ಪೈಚಾರು ಪೆಟ್ರೋಲ್ ಬಂಕ್ನಲ್ಲೂ ನಡೆದಿದೆ. ಒಬ್ಬ ವ್ಯಕ್ತಿ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಾಹನಗಳು ಎಲ್ಲಿ ಕಂಡುಬಂದರೂ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.