ಉಡುಪಿ:(ಜ.22) ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುಮನ್ ಎಸ್ (24), ಸುಹಾನ್ ಖಾನ್(22) ಮತ್ತು ಮೊಹಮ್ಮದ್ ಮಹಾಝ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಉಜಿರೆ: ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ “ಏಕತ್ವಮ್” ಅಂತರ್ ತರಗತಿ ಫೆಸ್ಟ್
ವೈದ್ಯ ವಿದ್ಯಾರ್ಥಿ ಹೆಚ್ಚಿನ M.PH ವಿಧ್ಯಾಭ್ಯಾಸನ್ನು ಯುಕೆ ಯಲ್ಲಿ ಮಾಡುವ ಸಲುವಾಗಿ ದುಬೈಗೆ ತೆರಳಿ ಅಫ್ತಾಬ್ ನನ್ನು ಭೇಟಿ ನಂತರ UK ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿತ್ತು.
ಅಫ್ತಾಬ್ ವಿದ್ಯಾರ್ಥಿಗೆ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದ. ಅದನ್ನು ವಿದ್ಯಾರ್ಥಿ ನೀಡಿದ್ದ. ನಂತರ ಆರೋಪಿಗಳು ವಿದ್ಯಾರ್ಥಿಯ ಕರೆಯನ್ನು ಸ್ವೀಕರಿಸದೆ ಯುಕೆಯಲ್ಲಿ M.PH ವಿಧ್ಯಾಭ್ಯಾಸಕ್ಕೆ ಸೀಟನ್ನೂ ಕೊಡಿಸದೇ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.