Thu. Jan 23rd, 2025

Chennai: 10ನೇ ಕ್ಲಾಸ್ ಹುಡ್ಗನ ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ವಿವಾಹಿತೆ ಅರೆಸ್ಟ್

ಚೆನ್ನೈ(ಜ.23) ಮಹಿಳೆ, ಹೆಣ್ಮು ಮಕ್ಕಳ ಮೇಲಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಇತ್ತ ಪುರುಷ ಹಾಗೂ ಬಾಲಕರ ಮೇಲಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ 17 ವರ್ಷದ ಬಾಲಕನ ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಹುಡುಗ ನಾಪತ್ತೆಯಾದ ಬೆನ್ನಲ್ಲೇ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮುಂಬೈ: ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆ

10ನೇ ತರಗತಿ ಹುಡುಗ ಹಾಗೂ ಆತನ ಕುಟುಂಬ ವಾಸಿಸುತ್ತಿದ್ದ ಅದೇ ಗ್ರಾಮದಲ್ಲಿ 28ರ ಹರೆಯದ ವಿನೋಧಿನಿ ಅನ್ನೋ ವಿವಾಹಿತ ಮಹಿಳೆ ವಾಸವಾಗಿದ್ದಳು. ಇಬ್ಬರು ಮಕ್ಕಳು ಹಾಗೂ ಕುಟುಂಬದ ಜೊತೆಗಿದ್ದ ಈ ಮಹಿಳೆಗೆ 17ರ ಹುಡುಗನ ಮೇಲೆ ಪ್ರೀತಿ ಶುರುವಾಗಿದೆ. ಫೋನ್ ನಂಬರ್ ಪಡೆದು ಪ್ರತಿ ದಿನ ಕರೆ ಮಾಡಲು ಆರಂಭಿಸಿದ್ದಾಳೆ. ಹೀಗೆ ಹುಡುಗನ ಜೊತೆ ಪ್ರೀತಿ ಬೆಳೆಸಿಕೊಂಡಿದ್ದಾಳೆ. ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಕರೆಯಿಸುತ್ತಿದ್ದ ಹುಡುಗನ ಜೊತೆ ಅತ್ಯಾಪ್ತ ಸಮಯ ಕಳೆದಿದ್ದಾಳೆ.

ಹುಡುಗನ ಪೋಷಕರು ಹಾಗೂ ಕುಟುಂಬಸ್ಥರಿಗೆ ಈ ರಿಲೇಶನ್‌ಶಿಪ್ ಸುಳಿವೇ ಇರಲಿಲ್ಲ. ಹೀಗಿರುವಾಗ ಏಕಾಏಕಿ ಶಾಲೆಗೆ ತೆರಳಿದ ಮಗ ಮನೆಗೆ ಮರಳಲಿಲ್ಲ. ರಾತ್ರಿಯಾದರೂ ಮನೆಗೆ ಮರಳಲೇ ಇಲ್ಲ. ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ತಡ ರಾತ್ರಿಯಾಗುತ್ತಿದ್ದಂತೆ ಬಾಲಕ ಮಿಸ್ಸಿಂಗ್ ಅನ್ನೋದು ಖಚಿತವಾಗಿದೆ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಡ ರಾತ್ರಿಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಾಲಕನ ಗೆಳೆಯರು ಸೇರಿದಂತೆ ಹಲವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ವಿನೋಧಿನಿ ಅನ್ನೋ ಮಹಿಳೆ ಜೊತೆ ಆಪ್ತವಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿದ ಪೊಲೀಸರು ಮರು ದಿನ ಬೆಳಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

ವಿನೋಧಿನಿ ಮನೆಗೆ ತೆರಳಿದಾಗ ಆಕೆಯೂ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲಿಗೆ ಪೊಲೀಸರ ಅನುಮಾನ ಬಲವಾಗಿತ್ತು. ಟವರ್ ಲೊಕೇಶನ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇತ್ತ ವಿನೋಧಿನಿ ತನ್ನ ಸಂಬಂಧಿಕರ ಮನೆಯನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದಳು. ಈ ಬಾಡಿಗೆ ಮನೆಗೆ ಬಾಲಕನ ಕರೆದುಕೊಂಡು ಹೋಗಿದ್ದಾಳೆ. ಪ್ರೀತಿ ಹೆಸರಲ್ಲಿ ಬಾಲಕನ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ.

ಪೊಲೀಸರು ಮಹಿಳೆ ಪತ್ತೆ ಹಚ್ಚಿದ್ದಾರೆ. ವಿನೋಧಿನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಬಾಲಕನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಇತ್ತ ಬಾಲಕನ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣ ಇದೀಗ ತಿರುವಲ್ಲೂರಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹಲವು ಪೋಷಕರು ಈ ಘಟನೆಯಿಂದ ಆಕಂಕಗೊಂಡಿದ್ದಾರೆ. ತಮಿಳುನಾಡಿನಲ್ಲಿ 2024ರಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಸತ್ಯಪ್ರಿಯಾ ಅನ್ನೋ ಮಹಿಳೆ ತನ್ನ ಪುತ್ರನ ತರಗತಿಯ ಸಹಪಾಠಿಯನ್ನೇ ಬಳಸಿಕೊಂಡು ಅರೆಸ್ಟ್ ಆಗಿದ್ದರು. ಈ ಘಟನೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನೋ ಕಾರಣ ನೀಡಿ ಮಗನ ಸಹಪಾಠಿ ಮನೆಯಲ್ಲೇ ಉಳಿದುಕೊಂಡ ಸತ್ಯಪ್ರಿಯ, ಬಾಲಕನ ಬಳಸಿಕೊಂಡಿದ್ದಳು. ಈ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೇ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು