ಹೈದರಾಬಾದ್:(ಜ.23) ಯುವತಿಯೊಬ್ಬಳು ತಾನು ಪ್ರಿಯಕರನ ಜತೆಗೆ ಚಾಟ್ ಮಾಡಿದ ವಿಚಾರ ಮನೆಯವರಿಗೆ ಗೊತ್ತಾಗಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ಭಾರ್ಗವಿ (19) ಎನ್ನಲಾಗಿದೆ.
ಭಾರ್ಗವಿ ಸಿದ್ದಿಪೇಟೆ ಜಿಲ್ಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಈಕೆ ಇಂಟರ್ ಮೀಡಿಯೇಟ್ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು.
ಈಕೆಯ ಸಹೋದರಿ ಭಾರ್ಗವಿ ಪ್ರಿಯಕರನ ಜತೆ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದ ವಿಚಾರವನ್ನು ಗಮನಿಸಿದ್ದು, ಈ ವಿಷ್ಯವನ್ನು ಅಪ್ಪ – ಅಮ್ಮನಿಗೆ ಹೇಳುತ್ತಾಳೆ ಎನ್ನುವ ಭೀತಿಯಲ್ಲಿ ಭಾರ್ಗವಿ ಚಲಿಸುತ್ತಿರುವ ರೈಲಿನಡಿ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎನ್ನಲಾಗಿದೆ.
ಪೊಲೀಸರು ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.