ಉಪ್ಪಿನಂಗಡಿ:(ಜ.23) ಉಪ್ಪಿನಂಗಡಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ತಾನು ಶ್ರೀಮಂತನೆಂದು ಹೇಳಿಕೊಂಡು ಹಿಂದೂ ಯುವತಿಯನ್ನು ಮದುವೆಯಾಗಿದ್ದು, ಆಕೆಗೆ ಮಗುವಾದ ಬಳಿಕ ಸತ್ಯಾಂಶವೆಲ್ಲವೂ ತಿಳಿದು ಬಂದಿದೆ. ಎಲ್ಲಾ ನಿಜಾಂಶ ಗೊತ್ತಾದ ಬಳಿಕ ಕೋಪಗೊಂಡ ಹೆಂಡತಿ ನಡು ರಸ್ತೆಯಲ್ಲಿ ತನ್ನ ಪತಿಗೆ ಜಾಡಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಹಿಂದಿ ಭಾಷಿಗ ಸಮಿರುಲ್ಲಾ ಎಂಬಾತ ಶಿಕಾರಿಪುರದ ಪವಿತ್ರ ಎಂಬವರನ್ನು ತಾನು ಸಿರಿವಂತ, ಸಾಕಷ್ಟು ಹಣ ತನ್ನಲ್ಲಿದೆ ಎಂದು ನಂಬಿಸಿ ಪ್ರೇಮಕ್ಕೆ ಸಿಲುಕಿಸಿದ್ದ. ಹೆತ್ತವರನ್ನು ಧಿಕ್ಕರಿಸಿ ಪ್ರಿಯತಮನೊಂದಿಗೆ ಬದುಕು ಕಟ್ಟಬಲ್ಲೆನೆಂದು ಪವಿತ್ರಳು ಬೆಂಗಳೂರಿಗೆ ಬಂದಿದ್ದರು. ದಿನ ಕಳೆದಂತೆಲ್ಲಾ ತಾನು ನಂಬಿ ಬಂದಾತನ ನಿಜ ಸ್ವರೂಪ ನಿಧಾನವಾಗಿ ತಿಳಿಯಲಾರಂಭಿಸಿತು. ಅಷ್ಟರಲ್ಲಾಗಲೇ ಆಕೆ ಗರ್ಭಿಣಿಯಾಗಿ ಮಗುವಿನ ತಾಯಿಯೂ ಆಗಿಬಿಟ್ಟಿದ್ದಳು.
ಸಮೀರುಲ್ಲಾ ಕಳೆದೆರಡು ದಿನಗಳ ಹಿಂದೆ ಉಡುಪಿಯತ್ತ ಹೋಗೋಣವೆಂದು ಪತ್ನಿ ಪವಿತ್ರಾಳನ್ನು ಬುರ್ಖಾ ತೊಡಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ವೇಳೆ ಸಮಿರುಲ್ಲಾನಲ್ಲಿ ಬಸ್ಸಿನ ಟಿಕೆಟಿಗೂ ಹಣವಿರಲಿಲ್ಲ. ಹೀಗಾಗಿ ನಿರ್ವಾಹಕ ಉಪ್ಪಿನಂಗಡಿಯಲ್ಲಿ ಸಮಿರುಲ್ಲಾನನ್ನು ಇಳಿಸಿದ್ದ. ಪತಿಯೊಂದಿಗೆ ಬಸ್ಸಿನಿಂದ ಇಳಿದ ಪವಿತ್ರಾಳಿಗೆ ಅವಮಾನವಾದಂತಾಗಿ ಹಣವಿಲ್ಲದ ಮೇಲೆ ಪ್ರಯಾಣಕ್ಕೆ ಮುಂದಾದ ಗಂಡನ ವರ್ತನೆಯಿಂದ ಆಕ್ರೋಶಗೊಂಡು ಬೀದಿಯಲ್ಲೇ ಆತನಿಗೆ ಹೊಡೆದಿದ್ದಾಳೆ.
ಇವರಿಬ್ಬರ ಸಂಘರ್ಷವನ್ನು ಕಂಡು ಜನ ಜಮಾಯಿಸಿ ವಿಚಾರಿಸಿದಾಗ ಸಮೀರನು ತಾನು ಮುಸ್ಲಿಂ ಎಂದೂ, ತನ್ನ ಪತ್ನಿ ಹಿಂದೂ ಎಂದೂ ಪರಿಚಯಿಸಿದ್ದ. ಅಲ್ಲದೆ ಪತ್ನಿ ಪವಿತ್ರಳು ಹೆಚ್ಚಾಗಿ ತನ್ನ ಮೇಲೆ ದಾಳಿ ಮಾಡುತ್ತಿದ್ದಾಳೆ ಎಂದು ಗೊತ್ತಾದಾಗ ಇದು ಮುಸ್ಲಿಮರು ಹೆಚ್ಚಿರುವ ಪ್ರದೇಶ ನೀನು ನನಗೇನು ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಹಾಕಿದ್ದನು. ಅಷ್ಟರಲ್ಲಿ ಪೊಲೀಸರು ಬಂದು ಇವರನ್ನು ವಶಕ್ಕೆ ಪಡೆದು ಎಲ್ಲವನ್ನು ವಿಚಾರಿಸಿದ ಬಳಿಕ ತಾವೇ ಟಿಕೇಟಿಗೆ ಹಣ ನೀಡಿ ಮರಳಿ ಬೆಂಗಳೂರಿಗೆ ಕಳುಹಿಸಿದ್ದಾರೆ.