ಮಡಂತ್ಯಾರು: (ಜ.24) ಪವರ್ ಹೌಸ್ ಬ್ಯಾಟರಿ ಅಂಗಡಿಯಿಂದ ಕಳ್ಳನೋರ್ವ ಮೊಬೈಲ್ ಎಗರಿಸಿದ ಘಟನೆ ಜ.24 ರಂದು ನಡೆದಿದೆ.
ಇದನ್ನೂ ಓದಿ: Oyo Room: ಓಯೋ ರೂಮ್ ನಲ್ಲಿ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಲವ್ ಬರ್ಡ್ಸ್!!!!
ಭಿಕ್ಷೆ ಬೇಡುವ ನೆಪದಲ್ಲಿ ಬಂದು ಜಿತೇಶ್ ಮಾಲಕತ್ವದ ಪವರ್ ಹೌಸ್ ಅಂಗಡಿಯಿಂದ ಮೊಬೈಲ್ ಎಗರಿಸಿದ್ದಾನೆ. ಮೊಬೈಲ್ ಕದಿಯುವ ದೃಶ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಬೈಲ್ ಕದ್ದ ತಕ್ಷಣ ಯಾರಿಗೂ ಅನುಮಾನ ಬಾರದಂತೆ ತನ್ನ ಜೇಬಿನಲ್ಲಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಪವರ್ ಹೌಸ್ ಮಾಲೀಕ ಜಿತೇಶ್ ಜೈನ್ ಅವರಿಗೆ ಮೊಬೈಲ್ ಕಳವಾದ ವಿಷಯ ತಿಳಿದು ಕೆಲವು ಮೊಬೈಲ್ ಅಂಗಡಿಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಮೊಬೈಲ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.