Fri. Jan 24th, 2025

Oyo Room:‌ ಓಯೋ ರೂಮ್‌ ನಲ್ಲಿ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಲವ್‌ ಬರ್ಡ್ಸ್!!!

Oyo Room:‌(ಜ.24) ಓಯೋ ರೂಮ್‌ ನಲ್ಲಿ ಪ್ರೇಮಿಗಳಿಬ್ಬರು ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ತಗ್ಲಾಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಶಿವಮೊಗ್ಗ: ನೇಣು ಬಿಗಿದುಕೊಂಡು 25 ರ ಯುವತಿ ಆತ್ಮಹತ್ಯೆ!!

ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್‌ ನಲ್ಲಿ ಪ್ರೇಮಿಗಳಿಬ್ಬರು ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾರೆ. ಅದೇನೆಂದರೆ ಅಂತರರಾಜ್ಯ ಪ್ರೇಮಿಗಳಿಬ್ಬರು ತುಂಬಾ ದುಡ್ಡು ಮಾಡಿ ಐಶಾರಾಮಿ ಜೀವನ ಸಾಗಿಸೋಣ ಎನ್ನುವ ಯೋಜನೆ ಹಾಕಿಕೊಂಡು ಮಾಡಿ ಗಾಂಜಾ ವ್ಯಾಪಾರ ಶುರು ಮಾಡಿದ್ದಾರೆ. ಈ ಕಳ್ಳ ಜೋಡಿ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್‌ನಲ್ಲಿ ಉಳಿದುಕೊಂಡು ಅಲ್ಲಿಂದಲೇ ಗಾಂಜಾ ದಂಧೆ ಆರಂಭ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಅಂದಹಾಗೆ ಇದರ ಸುಳಿವು ಸಿಕ್ಕ ಕೂಡಲೇ ಪೊಲೀಸರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಯುವಕ ಹಾಗೂ ಯುವತಿಯನ್ನು ಎಸ್‌ಟಿಎಫ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕವಾಲಿಯ ದೇವೆಂದೂಲ ರಾಜು (25) ಮಧ್ಯಪ್ರದೇಶದ ಸಂಜನಾ ಮಂಜ (18) ಬಂಧಿತರಾಗಿದ್ದಾರೆ. ಇವರು ಭೇಟಿಯಾದ ಕೆಲವೇ ದಿನಗಳಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಳಿಕ ಹಣ ಗಳಿಸುವ ಯೋಜನೆ ರೂಪಿಸಿದ್ದು, ಓಯೋ ರೂಮ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು. ಇವರಿಬ್ಬರು ಕೊಂಡಾಪುರದ ಓಯೋ ರೂಮ್‌ನಲ್ಲಿ ತಂಗಿದ್ದು, ತುಂಬಾ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು. ಎಸ್‌ಟಿಎಫ್ ತಂಡ ತಪಾಸಣೆ ನಡೆಸಿ ದಾಳಿ ನಡೆಸಿದೆ. ಇಬ್ಬರೂ ಬೇರೆ ಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *