Fri. Jan 24th, 2025

Punjalakatte: ಇನ್ಸ್ಟಾಗ್ರಾಂನಲ್ಲಿ ಬೇರೊಬ್ಬ ಯುವತಿಯ ಫೋಟೋಗೆ ಲೈಕ್‌ – ನಿಶ್ಚಿತಾರ್ಥ ಮಾಡಿಕೊಂಡ ಯುವತಿಯಿಂದ ಕಿರಿಕ್‌ – ಮನನೊಂದು ಯುವತಿ ಎದುರಲ್ಲೇ ದೈವಪಾತ್ರಿ ಆತ್ಮಹತ್ಯೆ!!

ಪುಂಜಾಲಕಟ್ಟೆ:(ಜ.24) ಇನ್‌ಸ್ಟಾಗ್ರಾಂ ನಲ್ಲಿ ಬೇರೊಬ್ಬ ಯುವತಿಯ ಫೋಟೋಗೆ ಲೈಕ್‌ ಕೊಟ್ಟದ್ದಕ್ಕೆ ಆತನೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಹುಡುಗಿ ಆತನ ಮನೆಗೆ ಬಂದು ಜಗಳ ಮಾಡಿದ್ದು, ಇದರಿಂದ ನೊಂದ ಯುವಕ ಆಕೆಯ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೇತನ್‌ (25ವ) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಮಂಗಳೂರಿನ ಯುವತಿ ಚೈತನ್ಯ ಜೊತೆ 8 ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥವಾಗಿತ್ತು.

ಜ.21 ರಂದು ಚೇತನ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಯುವಕನ ತಾಯಿ ಪುಷ್ಪಾ ಪುಂಜಾಲಕಟ್ಟೆ ಠಾಣೆಗೆ ದೂರನ್ನು ನೀಡಿದ್ದಾರೆ.

ಏನಿದು ಘಟನೆ?:
ಜ.21 ರಂದು ಪುಷ್ಪಾ ಅವರು ತನ್ನ ತವರು ಮನೆಗೆ ಹೋಗಿದ್ದರು. ಚೇತನ್‌ ಒಬ್ಬನೇ ಮನೆಯಲ್ಲಿದ್ದ. ಬೆಳಿಗ್ಗೆ 11 ಗಂಟೆಗೆ ಚೈತನ್ಯ ಪುಷ್ಪಾರಿಗೆ ಕರೆ ಮಾಡಿ ನಾನು ನಿನ್ನ ಮನೆಗೆ ಬಂದಿದ್ದು, ಚೇತನ್‌ ಮನೆಯಲ್ಲಿ ಮಲಗಿದ್ದವನು ಎದ್ದೇಳುತ್ತಿಲ್ಲ, ಕೂಡಲೇ ಮನೆಗೆ ಬನ್ನಿ ಎಂದು ಹೇಳಿದ್ದಳು.

ಹೀಗಾಗಿ 11.30ರ ಸುಮಾರಿಗೆ ಪುಷ್ಪಾ ಅವರು ತವರು ಮನೆಯಿಂದ ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಚೇತನ್‌ ಬಾತ್‌ರೂಂ ಮತ್ತು ಮನೆಯ ಪ್ಯಾಸೇಜ್‌ ಮಧ್ಯೆ ಮಲಗಿದ್ದ ಸ್ಥಿತಿಯಲ್ಲಿದ್ದ. ಪುಷ್ಪಾ ಅವರು ಮನೆಯ ಛಾವಣಿ ಕಡೆ ನೋಡಿದಾಗ ನೇಣು ಹಾಕಿದ ಸ್ಥಿತಿಯಲ್ಲಿ ಲುಂಗಿಯೊಂದು ಕಂಡು ಬಂದಿದೆ.

ಈ ಬಗ್ಗೆ ಪುಷ್ಪಾ ಅವರು ಚೈತನ್ಯರಲ್ಲಿ ಪ್ರಶ್ನೆ ಮಾಡಿದಾಗ, ಇನ್‌ಸ್ಟಾಗ್ರಾಂನಲ್ಲಿ ಚೇತನ್‌ ಹುಡುಗಿಯೊಬ್ಬಳಿಗೆ ಲೈಕ್‌ ಮಾಡಿದ್ದನ್ನು ಪ್ರಶ್ನೆ ಮಾಡಿದ್ದು, ಇಬ್ಬರ ಮಧ್ಯೆ ಗಲಾಟೆಯಾಗಿದೆ. ಬೇಸರಗೊಂಡ ಚೇತನ್‌ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನೇ ಕೆಳಗಿಳಿಸಿ ಆರೈಕೆ ಮಾಡಿದ್ದೇನೆ ಎಂದು ತಿಳಿಸಿದ್ದಳು ಎಂದು ಪುಷ್ಪಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *