Fri. Jan 24th, 2025

Punjalakatte: ನಿಶ್ಚಿತಾರ್ಥಗೊಂಡ ಯುವಕ ಆತ್ಮಹತ್ಯೆ ಪ್ರಕರಣ – ಚೇತನ್ ಸಾವಿನ ಸುತ್ತ ಅನುಮಾನದ ಹುತ್ತ!! – ಅಷ್ಟಕ್ಕೂ ಅಂದು ಆಗಿದ್ದೇನು? – ಚೈತನ್ಯ ಚೇತನ್‌ ತಾಯಿ ಬಳಿ ಹೇಳಿದ್ದೇನು?!

ಪುಂಜಾಲಕಟ್ಟೆ:(ಜ.24) ವಿವಾಹ ನಿಶ್ಚಿತಾರ್ಥವಾದ ಹುಡುಗಿ ಜತೆ ಇನ್ಸ್ಟ್ರಾಗ್ರಾಮ್ ಬಗ್ಗೆ ನಡೆದ ಮಾತುಕಥೆ ಯುವಕನ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾದ ಘಟನೆ ಜ.21ರಂದು ಸಂಭವಿಸಿದೆ.

ಇದನ್ನೂ ಓದಿ: ಪುತ್ತೂರು: ಹುಟ್ಟೂರಿಗೆ ಆಗಮಿಸಿದ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ಯ


ಬಂಟ್ವಾಳ ತಾ.ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಮನೆ ನಿವಾಸಿ ಪುಷ್ಪಾ ಹಾಗೂ ದಿ. ಯೋಗೀಶ್ ಅವರ ಚೇತನ್(25ಮೃತಪಟ್ಟವರು.
ಚೇತನ್ ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ಚೇತನ್ ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ಮಂಗಳೂರು ತಾಲೂಕು ಕಂದಾವರ ಗ್ರಾಮದ ಓಣಿಬಾಗಿಲು ಮನೆ ನಿವಾಸಿ ದಿ.ಬಾಬು ಎಂಬವರ ಮಗಳಾದ ಚೈತನ್ಯಾ ಎಂಬವಳೊಂದಿಗೆ ಸುಮಾರು 8 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು.

ಜ.21 ರಂದು ಬೆಳಗ್ಗೆ ಸುಮಾರು 11ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದು, ಪುಷ್ಪಾ ಅವರು ತನ್ನ ತವರು ಮನೆಯಲ್ಲಿದ್ದ ಸಮಯ ಚೈತನ್ಯಾಳು ಅವಳ ಮೊಬಲ್‌ನಿಂದ ಪುಷ್ಪಾ ಅವರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ.

ಪುಷ್ಪಾ ಅವರು 11.30 ಕ್ಕೆ ಬಂದು ನೋಡಿದಾಗ ಮನೆಯ ಬಾತ್ ರೂಂ ಮತ್ತು ಮನೆಯ ಮಧ್ಯೆ ಇರುವ ಪ್ಯಾಸೇಜ್ ನಲ್ಲಿ ಚೇತನ್ ಮಲಗಿದ್ದ ಸ್ಥಿತಿಯಲ್ಲಿದ್ದು, ಚೇತನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರೂ ಏಳದೇ ಇದ್ದಾಗ, ಪುಷ್ಪಾ ಅವರು ಮನೆಯ ಛಾವಣಿ ಕಡೆ ನೋಡಿದಾಗ ಲುಂಗಿಯಲ್ಲಿ ನೇಣು ಹಾಕಿದ ರೀತಿಯಲ್ಲಿ ಲುಂಗಿಯನ್ನು ನೋಡಿ, ಚೈತನ್ಯಾಳಲ್ಲಿ ಕೇಳಲಾಗಿ, ಚೇತನ್ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ತಾನು ಮನೆಗೆ ಬಂದಿರುವುದಾಗಿ, ಈ ವಿಚಾರದ ಬಗ್ಗೆ ಅವರಿಬ್ಬರಿಗೆ ಗಲಾಟೆಯಾಗಿತ್ತು.

ಇದರಿಂದ ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಚೈತನ್ಯಾಳು ಆರೈಕೆ ಮಾಡಿರುವುದಾಗಿ ತಿಳಿಸಿದ್ದಾಳೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಕೊಲೆ ಶಂಕೆ?
ಚೈತನ್ಯ ಹಾಗೂ ಚೇತನ್ ಅವರ ಪ್ರೇಮ‌ಪ್ರಕರಣವಾಗಿದ್ದು, ಸಾಕಷ್ಟು ವಿವಾದಾತ್ಮಕ ಮಾತುಗಳು ಚೇತನ್ ಸಾವಿನ ಬಳಿಕ ಕೇಳಿಬರುತ್ತಿದ್ದು, ಈತನ ಕೊಲೆಯಾಗಿರಬಹುದಾ? ಎಂಬ ಸಂಶಯಗಳು ಬಲವಾಗಿ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಚೇತನ್ ಸಾವಿನ ಬಗ್ಗೆ ಸಂಶಯವಿದ್ದು, ತನಿಖೆ ನಡೆಸುವಂತೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಅಂತು ಗೊಂದಲದ ಹೇಳಿಕೆಗಳು ಇದೀಗ ಸಾಕಷ್ಟು ಚರ್ಚೆಗೆ ಗ್ರಾಮವಾಗಿದೆ.

Leave a Reply

Your email address will not be published. Required fields are marked *