Fri. Jan 2nd, 2026

Ujire: ಗಣರಾಜ್ಯೋತ್ಸವ ಪರೇಡ್ – ಉಜಿರೆ ಕಾಲೇಜಿನ ಹರ್ಷಿತಾ ಕಿರಣ್ ಹೆಗಡೆ ಆಯ್ಕೆ

ಉಜಿರೆ:(ಜ.24) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್ ಸಿ ಸಿ ನೌಕಾದಳದ ಕೆಡೆಟ್, ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹರ್ಷಿತಾ ಕಿರಣ್ ಹೆಗಡೆ ಜ. 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ

ಇದನ್ನೂ ಓದಿ: ಪಡುಬಿದ್ರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೀಟರ್‌ ಬಡ್ಡಿ ದಂಧೆ

ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಕಳೆದ 22 ವರ್ಷಗಳಲ್ಲಿ ಈವರೆಗೆ ಕಾಲೇಜಿನ ನೌಕಾದಳದಿಂದ ಒಟ್ಟು 58 ಕೆಡೆಟ್ ಗಳು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದಾರೆ.

ಪ್ರಸ್ತುತ 59ನೇ ಕೆಡೆಟ್ ಹರ್ಷಿತಾ ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಹಾಗೂ ಬೋಧಕ ವೃಂದದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *