Video viral: ಬಿಗ್ ಬಾಸ್ ಮನೆಯೊಳಗಿನ ಭವ್ಯ ಗೌಡ ಮತ್ತು ತ್ರಿವಿಕ್ರಮ್ ಅವರ ನಡುವಿನ ವಿಡಿಯೋ ಒಂದು ವೈರಲ್ ಆಗಿದೆ.
ಇದನ್ನೂ ಓದಿ: ಧರ್ಮಸ್ಥಳ: ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!!
ಬಿಗ್ ಬಾಸ್ ಮನೆಯೊಳಗಡೆ ಕಪಲ್ ಜೋಡಿ ಎಂದೇ ಖ್ಯಾತಿ ಪಡೆದಿರುವವರು ಭವ್ಯ ಗೌಡ ಮತ್ತು ತ್ರಿವಿಕ್ರಮ್ ಅವರು. ತ್ರಿವಿಕ್ರಮ್ ಅವರು ಭವ್ಯ ಗೌಡಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಾರಾಂತ್ಯದಲ್ಲಿ ಈ ಕುರಿತು ಸುದೀಪ್ ಅವರು ಕೂಡ ಇವರಿಬ್ಬರ ಕಾಲು ಎಳೆದಿದ್ದಾರೆ. ಈ ಬೆನ್ನಲ್ಲೇ ಇವರಿಬ್ಬರು ಮಾತನಾಡಿದ ವಿಡಿಯೋ ವೈರಲಾಗಿದೆ. ನಾಲ್ಕು ದಿನದ ಹಿಂದೆ ಇವರಿಬ್ಬರ ನಡುವೆ ಬೇರೆಯದೇ ‘ಮಾತುಕತೆ’ ನಡೆದಿತ್ತು ಅನ್ನೋದಕ್ಕೆ ಸಾಕ್ಷಿಯಾಗಿ ಈ ವೀಡಿಯೋ ಲೀಕ್ ಆಗಿದೆ.
ಏನಿದೆ ಆ ವೈರಲ್ ವಿಡಿಯೋದಲ್ಲಿ!?:
ಬಿಗ್ ಬಾಸ್ ಫಿನಾಲೆ ಟೈಮಲ್ಲೇ ಆ ಕ್ಷಣಗಳ ವೀಡಿಯೋ ಸೋಷಿಯಲ್ ಮೀಡಿಯಾಗೆ ಬಂದು ಬಿದ್ದಿದೆ. “ನಿಜ ಓಕೆ ಅಂತೀಯಾ, ಕರೆಕ್ಟಾಗಿ ಹೇಳು, ಜೆನ್ಯೂನ್ ಆನ್ಸರ್?” ಅಂತ ತ್ರಿವಿಕ್ರಮ್ ಕೇಳಿದ್ದಾರೆ. ಅದಕ್ಕೆ ಭವ್ಯಾ, “ಅದೂ…..” ಅಂತ ರಾಗ ಎಳೆದಿದ್ದಾರೆ. ಆಮೇಲೆ , “ನಾನು ಫಸ್ಟ್ ಗೆಲ್ಲಬೇಕು” ಅಂದಿದ್ದಾರೆ. “ನಾನು ಕೇಳಿದ್ರಲ್ಲಿ ತಪ್ಪೇನಿದೆ ಭವ್ಯಾ?” ಅಂತ ತ್ರಿವಿಕ್ರಮ್ ಕೇಳಿದ್ದಾರೆ. “ಮೇ ಬಿ ಮೆ ನಾಟ್ ಬಿ” ಅಂತ ಭವ್ಯ ಹೇಳಿದ್ದಾರೆ. “ಅದನ್ನೆಲ್ಲ ಹೆಂಗೆ ಓಪನ್ನಾಗಿ ಹೇಳೋದು….” ಅಂತ ನಾಚಿಕೊಂಡಿದ್ದಾರೆ. “ಗೆದ್ದಾಗ ಹೇಳಿದ್ರೆ ಏನ್ ಹೇಳ್ತಿದ್ದೆ?” ಅಂತ ಕೇಳಿದ್ದಾರೆ. “ಓಕೆ ಅಂತಿದ್ದೆ” ಅಂತ ಭವ್ಯಾ ಹೇಳಿದ್ದಾರೆ.
ಇನ್ನು ಇವರಿಬ್ಬರ ಮಾತುಗಳನ್ನು ಕೇಳಿ ಜನ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ. ಕುಟುಂಬದವರೆಲ್ಲ ಕೂತು ನೋಡೋ ಶೋನಲ್ಲಿ ಇದೆಲ್ಲ ಏನು ನಡೀತಿದೆ ಅಂತೆಲ್ಲ ಹೇಳುತ್ತಿದ್ದಾರೆ. ಇನ್ನೂ ಕೆಲವರು ಅಶ್ಲೀಲವಾಗಿಯೂ ಕಾಮೆಂಟ್ ಮಾಡಿದ್ದಾರೆ. ಸದ್ಯ ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಈ ರಹಸ್ಯ ವೀಡಿಯೋ ಸೋಷಿಯಲ್ ಮೀಡಿಯಾ ತನಕ ತಲುಪಿದ್ದು ಹೇಗೆ ಅನ್ನೋ ಬಗೆಗೂ ಮಾತುಕತೆ ಶುರುವಾಗಿದೆ.