ಬಂದಾರು :(ಜ.26) ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಇದನ್ನೂ ಓದಿ: ಕಕ್ಕಿಂಜೆ: ವೃದ್ಧ ದಂಪತಿಗಳ ಕೊಲೆ ಪ್ರಕರಣ
ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಮೃತಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ನೂಜಿ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷರಾದ ಪುಷ್ಪಾವತಿ, ಸದಸ್ಯರಾದ ಪವಿತ್ರ, ಪರಮೇಶ್ವರಿ.ಕೆ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುಂಬುಡ,
ನಿವೃತ್ತ ಸೇನಾನಿ ಸಂಜೀವ ಗೌಡ ಕುಂಬುಡಂಗೆ, ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನೋಣಯ್ಯ ಗೌಡ, ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಅಂಡಿಲ, ಶ್ರೀ ಕ್ಷೇತ್ರ ಮುಂಡೂರು ಧರ್ಮದರ್ಶಿಗಳಾದ ಆನಂದ ಗೌಡ ಮುಂಡೂರು, ಅಮ್ಮು ಬಾಂಗೇರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಮೋಹನ್ ಶೆಟ್ಟಿ ಬಾಂಗೇರು, ಜನಾರ್ದನ ಗೌಡ ನಿರುಂಬುಡ, ಅಂಡೆಕೇರಿ ಮಸೀದಿ ಧರ್ಮಗುರುಗಳಾದ ಶಫೀಕ್ ಅಹ್ಸನಿ ಶಾಮಿಲ್ ಸಖಾಫಿ, ಕುಪ್ಪೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರ ವಾರಿಜ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೋಷಕ ವೃಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಅಮೃತ ಮಹೋತ್ಸವದ ಸಮಿತಿ, ಹಳೆ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಾವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಹ ಶಿಕ್ಷಕರರಾದ ಶ್ರೀಧರ ಸ್ವಾಗತಿಸಿ, ಶಿಕ್ಷಕರಾದ ಮಾಧವ ಗೌಡ ಡಿ ನಿರೂಪಿಸಿ, ಸಹಶಿಕ್ಷಕಿ ರಾಜಶ್ರೀ ಧನ್ಯವಾದವಿತ್ತರು.