Wed. Jan 29th, 2025

Bengaluru: ಗೀಸರ್ ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ ಕಿರಾತಕ – ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ – ಆಮೇಲೆ ಆಗಿದ್ದೇನು?!

ಬೆಂಗಳೂರು :(ಜ.26) ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಗೀಸರ್ ರಿಪೇರಿ ಮಾಡುವವ ಒಬ್ಬ ಗೀಸರ್ ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: Shahshikala: ಬ್ಲ್ಯಾಕ್‌ ಮೇಲ್‌ ಮಾಡಿ ನಿರ್ದೇಶಕನ ಜೊತೆ ಮದುವೆ

ಬೆಂಗಳೂರಿನ ಬನ್ನೇರುಘಟ್ಟದ ಸಿ.ಕೆ.ಪಾಳ್ಯದ ಮನೆಯೊಂದರಲ್ಲಿ ಗೀಸರ್ ಫಿಟ್​ ಮಾಡುವ ನೆಪದಲ್ಲಿ ಬಂದಿದ್ದ ಮುರಳಿ ಎಂಬಾತ ರಹಸ್ಯ ಕ್ಯಾಮರಾವನ್ನು ಅಳವಡಿಸಿದ್ದಾನೆ. ಕಳೆದ ಒಂದು ವರ್ಷದ ಹಿಂದೇನೆ ಆತ ಈ ಕ್ಯಾಮರಾ ಅಳವಡಿಸಿದ್ದ ಎನ್ನಲಾಗಿದೆ.

ಆದರೆ ಮನೆಯವರು ಗೊತ್ತಿಲ್ಲದೇ ಹಾಗೆ ಬಾತ್ ರೂಂ ಬಳಸಿದ್ದಾರೆ.ಆದರೆ ಸ್ನಾನಗೃಹ ಬಳಸಿದ ಮಹಿಳೆಯ ಖಾಸಗಿ ಫೋಟೋಗಳನ್ನು ರೆಕಾರ್ಡ್ ಮಾಡಿಕೊಂಡ ಗೀಸರ್ ಫಿಟ್‌ ಮಾಡಿದ ಕಿರಾತಕ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ.

ಕಳೆದ ಒಂದು ವರ್ಷದಿಂದ ಕಾಮುಕ ಮುರುಳಿ ಮಹಿಳೆಗೆ ನಾನು ಕರೆದಲ್ಲಿಗೆ ಬರಬೇಕು. ಅಕಸ್ಮಾತ್ ಬರದೇ ಹೋದರೆ ಫೋಟೋ, ವಿಡಿಯೋ ಎಲ್ಲ ವೈರಲ್ ಮಾಡಿ ಮರ್ಯಾದೆ ತೆಗಿತೀನಿ ಅಂತ ಬೆದರಿಕೆ ಹಾಕಿದ್ದಾನೆ.

ಇದರಿಂದ ಹೆದರಿ ಮಹಿಳೆ ಈ ವಿಷಯ ಯಾರಿಗೂ ಹೇಳಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಈತನ ಕಾಟ ಹೆಚ್ಚಾಗಿ ಮಹಿಳೆ ಮನೆಯಲ್ಲಿ ಎಲ್ಲ ವಿಷಯ ಹೇಳಿದ್ದಾಳೆ. ಆಗ ಸ್ಥಳೀಯ ನಿವಾಸಿಗಳು ಈತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Leave a Reply

Your email address will not be published. Required fields are marked *